May 5, 2024

Bhavana Tv

Its Your Channel

ಯಲ್ಲಾಪುರ ಪಟ್ಟಣದ ಗೌಸಿಯಾ ಮಸೀದಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆಟೋ ಗುರುತಿನ ತಂಡ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

ಯಲ್ಲಾಪುರ:- ಯಲ್ಲಾಪುರದ ಪ್ರಥಮ ಮಸಿದಿಯಾದ ಅಕಬರಗಲ್ಲಿರುವ ಗೌಸಿಯಾ ಮಸೀದಿಗೆ ಚುನಾವಣೆ ನಡೆದು ಆಟೋ ಗುರುತಿನ ತಂಡಕ್ಕೆ ಜಯಭೇರಿ ಸಿಕ್ಕಿತು.
ಕೆಲವು ತಿಂಗಳಿAದ ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದ ಪಟ್ಟಣದ ಗೌಸಿಯಾ ಮಸೀದಿ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣೆ ನಡೆದಿದ್ದು ಮೊಹಮ್ಮದ ಗೌಸ ನೇತ್ರತ್ವದ ಆಟೋ ತಂಡ ಗೆಲುವು ಸಾಧಿಸಿದ್ದು ಎಸ್.ಕೆ.ಬ್ಯಾರಿ ನೇತ್ರತ್ವದ ಚಾವಿ ಗುರುತಿನ ತಂಡ ಸೋಲಪ್ಪಿದೆ.
ಆಟೋ ಗುರುತಿನ ತಂಡದ ಸಲೀಮ ಸಯ್ಯದ ೧೩೯, ಸಮೀರ್ ಅಹ್ಮದ೧೩೫, ಸಯ್ಯದ ಇಸ್ಮಾಯಿಲ೧೩೩, ಅಬ್ದುಲ ಕರೀಮ್ ಶೇಖ೧೨೮, ಶಬ್ಬೀರ ಶೇಖ೧೨೭, ಅಬ್ದುಲ್ ಗಫಾರ೧೨೫, ಸಯ್ಯದ ಶಾಬಾಜ೧೨೪, ಶೇಖ ಜಾಹಿರ೧೨೪, ಮಕ್ಸೂದ ಅಕ್ತರ೧೨೨, ಅಬ್ದುಲ್ ಖಾದರ ೧೨೦, ಮೊಮ್ಮದ ತಬ್ರೇಜ೧೧೧ ಮತಗಳಿಸಿ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಸೂಚನೆ ಹೊರಬೀಳುತ್ತಿದ್ದಂತೆ ಎರಡು ಗುಂಪುಗಳಿAದ ೨೭ ನಾಮಪತ್ರಗಳು ಸಲ್ಲಿಕೆಯಾಗಿ, ೧೦ ನಾಮತ್ರಗಳನ್ನು ಹಿಂಪಡೆಯಲಾಗಿತ್ತು. ಕಣದಲ್ಲಿ ಒಟ್ಟು ಎರಡು ಗುಂಪುಗಳಿAದ ೧೧ ಸ್ಥಾನಗಳಿಗೆ ೧೭ ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ನಡೆಯಿತು.
ಆಟೋ ಗುರುತಿನಿಂದ ೧೧ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಾವಿ ಗುರುತಿನಡಿ ೬ ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು ೨೧೪ ಮತಗಳಳ್ಲಿ ೨೦೨ ಮತಗಳು ಚಲಾವಣೆಗೊಂಡಿತು. ಅವುಗಳಳ್ಲಿ ೭ ಮತಗಳು ತಿರಸ್ಕೃತಗೊಂಡವು. ಗೆಲುವು ಪಡೆದ ಸದಸ್ಯರಿಗೆ ಮಹಮದ ಗೌಸ್ ಮಾಲಾರ್ಪಣೆ ಮಾಡಿ, ಪುಷ್ಪ ನೀಡಿ ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ.

error: