May 5, 2024

Bhavana Tv

Its Your Channel

ಕೇಂದ್ರ ಸರಕಾರದ ಬುಡಕಟ್ಟು ಜನಾಂಗಗಳಿಗೆ ಸಂಬOಧಿಸಿದOತೆ ಇಲಾಖೆಗಳನ್ನು ಒಂದೇ ಸೂರಿನಡಿಯಲ್ಲಿ ತರಲು ನಿರ್ಧಾರ

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ಕೇಂದ್ರ ಸರಕಾರದ ಬುಡಕಟ್ಟು ಜನಾಂಗಗಳಿಗೆ ಸಂಬOಧಿಸಿದOತೆ ಇಲಾಖೆಗಳನ್ನು ಒಂದೇ ಸೂರಿನಡಿಯಲ್ಲಿ ತರಲು ನಿರ್ಧರಿಸಲಾಗಿದೆ ಎಂದು ವಿಧಾನಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಪತ್ರಿಕಾಗೋಷ್ಢಿಯಲ್ಲಿ ಮಾತನಾಡುತ್ತಿದ್ದರು. ದೆಹಲಿಯಲ್ಲಿ ಆಯೋಗದ ಅಧ್ಯಕ್ಷರಾದ ಹರ್ಷ ಚವ್ಹಾಣ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಬುಡಕಟ್ಟು ಆಯೋಗದ ಸಭೆಯಲ್ಲಿ ನಾನು ಭಾಗವಹಿಸಿರುವುದಾಗಿ ಹೇಳಿದರು.
ಬುಡಕಟ್ಟುಗಳಿಗೆ ಅನುಸೂಚಿತ ಪಂಗಡ ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕುಪತ್ರ ನೀಡುವ ಪ್ರಕ್ರಿಯೆ ಕರ್ನಾಟಕದಲ್ಲಿ ಮಂದಗತಿಯಲ್ಲಿ ಸಾಗಿದೆ. ಕಳೆದ ೧೫ ವರ್ಷದಲ್ಲಿ ೨೫ ರಷ್ಟು ಪ್ರಗತಿ ಆಗಿದೆ.ಹಕ್ಕು ಪತ್ರಪಡೆಯದೇ ಬುಡಕಟ್ಟು ಜನರ ಅಭಿವೃದ್ದಿ ಕುಂಠಿತವಾಗಿದೆ. ಹಕ್ಕು ಪತ್ರಗಳಲ್ಲಿಯೂ ದೋಷಗಳಿರುವುದರಿಂದ ಇದು ಅರಣ್ಯವಾಸಿಗಳ ಬದುಕಿಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಹಕ್ಕುಪತ್ರಗಳಲ್ಲಿ ವಾಸಕ್ಕೆ ಹಾಗೂ ಕೃಷಿಗೆ ಎಂದು ನಮೂದಿಸಬೇಕು.
ಧನಗರಗೌಳಿ, ಕುಣಬಿ, ಹಾಲಕ್ಕಿ ಒಕ್ಕಲಿಗ ಮುಂತಾದ ಪಾರಂಪರಿಕ ಅರಣ್ಯವಾಸಿಗಳು ನೂರಕ್ಕಿಂತ ಹೆಚ್ಚು ವರ್ಷಗಳಿಂದ ಬೇರೆ,ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು,ಅವರಿಗೂ ಹಕ್ಕುಪತ್ರ ನೀಡಬೇಕು.
ಈಗಾಗಲೇ ನೀಡಿರುವ ಹಕ್ಕುಪತ್ರಗಳು ಕೂಡಾ ಸಾಗುವಳಿ ಮಾಡಿರುವ ಪೂರ್ತಿ ಜಾಗಕ್ಕೆ ನೀಡಿರುವುದಿಲ್ಲ.ಅದನ್ನು ಪೂರ್ತಿಯಾಗಿ ನೀಡಿ , ಪಹಣಿ ಪತ್ರ ನೀಡಬೇಕು.ಅರಣ್ಯ,ಕಂದಾಯ,ಸಮಾಜಕಲ್ಯಾಣ ಇಲಾಖೆಗಳು ಸಮನ್ವಯತೆಯಿಂದ ಬುಡಕಟ್ಟು ಜನರ ಏಳಿಗೆ ಸಾಧಿಸಬೇಕು.ಅರಣ್ಯ ಸಂಭAದಿ ಕಾನೂನು ಇಡೀ ದೇಶಕ್ಕೆ ಒಂದೃ ಇದ್ದರೂ,ರಾಜ್ಯದಲ್ಲಿ ಕಠಿಣವಾಗಿ ಜಾರಿಗೊಳಿಸಲಾಗುತ್ತಿದೆ.ಬುಡಕಟ್ಟು ಜನರ ವಿಷಯ ಬಂದಾಗ ಮಾನವೀಯ ದೃಷ್ಢಿಯಿಂದ ನೋಡುವ ಅವಶ್ಯಕತೆ ಇದೆ ಎಂದರು.ಬುಡಕಟ್ಟು ಜನರನ್ನು ಅರಣ್ಯದ ಅವಿಭಾಜ್ಯ ಅಂಗ ಎಂದು ಪರಿಗಣಿಸಬೇಕೆಂದರು.
ಈ ಸಂದರ್ಭದಲ್ಲಿ
ವನವಾಸಿ ಕಲ್ಯಾಣ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಬು ಪಾಟೀಲ, ಸಿದ್ದಿ ಸಮುದಾಯದ ಪ್ರಮುಖ ಗೋಪಾಲ ಸಿದ್ದಿ, ಪ್ರಾಂತ ಹಿತರಕ್ಷಾ ಪ್ರಮುಖ ದೋಂಡು ಪಾಟೀಲ, ವನವಾಸಿ ಕಲ್ಯಾಣ ಜಿಲ್ಲಾ ಸಮಿತಿ ಅಧ್ಯಕ್ಷರಾದ ಗಿರಿಯಾ ಗೌಡ ಕುಮಟಾ ,ಕುಣಬಿ ಸಮಾಜದ ಪ್ರಮುಖ ರಸ್ಮಾ ಕುಣಬಿ ಉಪಸ್ಥಿತರಿದ್ದರು

error: