
ಮಂಚಿಕೇರಿ:- ಶ್ರೀರಾಜರಾಜೇಶ್ವರಿ ಯಕ್ಷಗಾನ ಸಂಸ್ಥೆ ಮಂಚಿಕೇರಿ ಹಾಗೂ ಸೇವಾ ಸಹಕಾರಿ ಸಂಘ ಹಾಸಣಗಿ ಇವುಗಳ ಸಹಯೋಗದಲ್ಲಿ ವಿವಿಧ ಪ್ರಾಯೋಜಕರ ನೆರವಿನೊಂದಿಗೆ ಇತ್ತೀಚೆಗೆ ಸಹಕಾರಿ ಸಂಘದ ಸಭಾಭವನದಲ್ಲಿ ೨೨ ನೆಯ ವರ್ಷದ ತಾಳಮದ್ದಲೆ ಕಾರ್ಯಕ್ರಮದ ಅಂಗವಾಗಿ ಪ್ರಸ್ತುತಗೊಂಡ `ರಾವಣ ವಧೆ’ ತಾಳಮದ್ದಲೆ ಕಲಾಸಕ್ತರನ್ನು ಖುಷಿಪಡಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ನಾರಾಯಣ ಭಾಗ್ವತ ಬಾಳೇಹದ್ದ; ಮದ್ದಲೆ ವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ; ಮುಮ್ಮೇಳದ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ (ರಾಮ), ವಿ||ಗಣಪತಿ ಭಟ್ಟ ಸಂಕದಗುAಡಿ (ರಾವಣ), ಹರೀಶ ಬಾಳಂತಿಮೊಗರು (ಮಂಡೋದರಿ) ಹಾಗೂ ಎಂ.ಎನ್.ಹೆಗಡೆ ಹಳವಳ್ಳಿ (ಮಾತಲಿ) ವಿವಿಧ ಪಾತ್ರಗಳನ್ನು ಸುಂದರವಾಗಿ ನಿರೂಪಿಸಿದರು
ವರದಿ: ವೇಣುಗೋಪಾಲ ಮದ್ಗುಣಿ

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ