April 18, 2025

Bhavana Tv

Its Your Channel

ಸೇನಾ ಮುಖ್ಯಸ್ಥ ಬಿಪಿನ ರಾವತ್ ಹಾಗೂ ಯೋಧರಿಗೆ ಶೃದ್ಧಾಂಜಲಿ

ವರದಿ:- ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ತಮಿಳುನಾಡಿನ ಕೋನೂರು ಬಳಿ ವಾಯು ಪಡೆ ಹೆಲಿಕಾಪ್ಟರ ಪತನಗೊಂಡು ಸೇನಾ ಮುಖ್ಯಸ್ಥ ಬಿಪಿನ್ ರಾವತ ಹಾಗೂ ಅವರ ಧರ್ಮಪತ್ನಿ ಮುಧಲಿಕಾ ರಾವತ ಹಾಗೂ ಇತರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಮೆಣದಬತ್ತಿ ಬೆಳಗಿ, ಪುಷ್ಪಾರ್ಚನೆ ಮಾಡಿ, ಮೌನಾಚರಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ಪಂಚಾಯತಿ ರಾಜ ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿಯ ರಾಜ್ಯ ಉಪಾದ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ರಾಮು ನಾಯ್ಕ, ಮಾಜಿ ಸೈನಿಕ ತುಳಸಿದಾಸ ನಾಯ್ಕ, ಬಿಜೆಪಿ ಮಂಡಳ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಯುವ ಮೋರ್ಚಾ ತಾಲೂಕಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ, ತಾಲೂಕಾ ಪ್ರಧಾನಕಾರ್ಯದರ್ಶಿ ಪ್ರಸಾದ ಹೆಗಡೆ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಆದಿತ್ಯ ಗುಡಿಗಾರ, ಪ.ಪಂ ಮಾಜಿ ಸದಸ್ಯರಾದ ಗಜಾನನ ನಾಯ್ಕ, ಉಮೇಶ ನಾಯ್ಡು, ಬಿಜೆಪಿ ಮಾಧ್ಯಮ ವಕ್ತಾರ ಕೆ.ಟಿ.ಹೆಗಡೆ, ನಾಗೇಶ ಯಲ್ಲಾಪುರಕರ, ನಿವೃತ್ತ ಶಿಕ್ಷಕ ಜಿ.ಎಂ.ತಾoಡೂರಾಯನ, ಶಿಕ್ಷಕರಾದ ಆರ್.ಐ.ನಾಯ್ಕ, ದುರಂದರ, ಪ್ರಮುಖರಾದ ಕಿಶೋರ ನಾಯ್ಕ ಮುಂತಾದವರಿದ್ದರು

error: