
ವರದಿ: ವೇಣುಗೋಪಾಲ ಮದ್ಗುಣಿ
ಉಮ್ಮಚಗಿ: ಇಲ್ಲಿಯ ಜನ ಬಹಳ ತಿಳಿದವರು. ಕಲೆ ಸಾಹಿತ್ಯ ಎಲ್ಲದರಲ್ಲೂ ಪಳಗಿದವರು. ನಾನೂ ಮೂರು ವರ್ಷ ಗುಡಿಗೇರಿ ಕಂಪನಿಯಲ್ಲಿ ಬಣ್ಣ ಹಚ್ಚಿದ್ದೆ. ನಂತರ ಸಿನಿಮಾಕ್ಕೆ ಪಾದವಿರಿಸಿದೆ. ಈಗ ಅದೆಲ್ಲ ನೆನಪು.ಹಿರಿಯ ಸಿನಿಮಾ ನಟರಾದ ನಿರ್ನಳ್ಳಿ ರಾಮಕೃಷ್ಣ ಅವರು ಉಮ್ಮಚಗಿಯ ವಿ.ಎಸ್. ಎಸ್. ಸಭಾಂಗಣದಲ್ಲಿ ಮಂಚೀಕೇರಿಯ ರಂಗ ಸಮೂಹದ ಕಲಾವಿದರು ಅಭಿನಯಿಸಲಿರುವ ಕಾಲಚಕ್ರ ನಾಟಕದ ಪ್ರದರ್ಶನಕ್ಕೂ ಮುನ್ನ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರಂಗ ನಟರೂ,ನಿರ್ದೇಶಕರೂ, ಸಂಘಟಕರೂ,ರAಗಸಮೂಹದ ಅಧ್ಯಕ್ಷರೂ ಆದ ಆರ್.ಎನ್. ಭಟ್ಟ ದುಂಡಿಯವರು, ಸೇವಾ ಸಹಕಾರಿ ಸಂಘವೊAದು ನಮ್ಮ ನಾಟಕದ ಕನಸಿನಲ್ಲಿ ನಮಗೆ ಸಹಕರಿಸುತ್ತಿರುವುದು ಇದೇ ಮೊದಲು. ಅದಕ್ಕಾಗಿ ಉಮ್ಮಚಗಿಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ದಣಿವರಿಯದೆ ಭಾಗಿಯಾದ ಇಲ್ಲಿನ ನಗುಮೊಗದ ಸಿಬ್ಬಂದಿ ವರ್ಗವನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ಹೇಳಿದರು.ಸಂಘದ ಅಧ್ಯಕ್ಷರಾದ ಎಂ.ಜಿ.ಭಟ್ಟ ಸಂಕದಗುAಡಿ ಸ್ವಾಗತಿಸಿ, ಕಲಾವಿದರಾದ ಎಂ.ಕೆ.ಭಟ್ಟ ಯಡಳ್ಳಿ ನಿರ್ವಹಿಸಿ,ಕಡೆಯಲ್ಲಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಕನೇನಳ್ಳಿ ವಂದನಾರ್ಪಣೆ ಸಲ್ಲಿಸಿದರು. ನಂತರ ತುಂಬಿದ ಸಭಾಂಗಣದಲ್ಲಿ ನಾಟಕ ಯಶಸ್ವಿಯಾಗಿ ನಡೆಯಿತು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ