May 13, 2024

Bhavana Tv

Its Your Channel

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಆಕಾಶವಾಣಿ ಕಾರವಾರ ಇವುಗಳ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕವಿ ಕಾವ್ಯ ಸಮಯ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ಧರ್ಮಗೃಂಥಗಳು ಕಾವ್ಯದಲ್ಲಿಯೇ ಇದ್ದು,ದೇವರನ್ನು ಕಾವ್ಯ ಮೆಚ್ಚಿಸುತ್ತಿದ್ದು,ಅದು ಶ್ರೇಷ್ಠವಾಗಿಯೇ ಇರಬೇಕು ಎಂದು ಡಾ.ಝಮೀರುಲ್ಲಾ ಷರೀಪ ಭಟ್ಕಳ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಆಕಾಶವಾಣಿ ಕಾರವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕವಿ ಕಾವ್ಯ ಸಮಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾವ್ಯ ತುಪ್ಪದಂತಿರಬೇಕು.ಕವಿತನ್ನ ಭಾವನೆಯನ್ನು ಹೆಪ್ಪುಹಾಕಿ,ಅದನ್ನು ಚಿಂತನೆಯ ಕಡೆಗೋಲಿನಿಂದ ಚೆನ್ನಾಗಿ ಕಡೆದು, ಬಂದ ಬೆಣ್ಣೆಯನ್ನು ಕಾಸಿ ತುಪ್ಪವನ್ನು ತೆಗೆದಾಗ ಅದೇ ನಿಜವಾದ ಘಟ್ಟಿಕಾವ್ಯವಾಗಲು ಸಾಧ್ಯ ಎಂದರು.ಕಾವ್ಯ ಜನರನ್ನು ಒಟ್ಟುಗೂಡಿಸಬೇಕು.ಅನ್ಯಾಯವನ್ನು ಹತ್ತಿಕ್ಕುವ ,ಅಶುದ್ದತೆಯನ್ನು ಪರಿಷ್ಕರಿಸುವ ಕಾವ್ಯ ಬರಬೇಕು.ಆಮೂಲಕ ಸಾಮಾಜಿಕ ಜಾತಿಯನ್ನು ಮೂಡಿಸಬೇಕೆಂದರು.
ಕಾರವಾರ ಆಕಾಶವಾಣಿಯ ನಿಲಯ ನಿರ್ದೇಶಕ ಎಚ್.ಬಿ.ರಾಮಡಗಿ ಮಾತನಾಡಿ,”ಕವಿ ಮನಸ್ಸು ಎಲ್ಲರಲ್ಲೂ ಇರುತ್ತದೆ.ಆದರೆ ಕಾವ್ಯ ಎಲ್ಲರಿಗೂ ಒಲಿಯುವುದಿಲ್ಲ.ಕಾವ್ಯದ ಮೂಲಕ ಮನಸ್ಸು ಅರಳಿಸುವ ಕೆಲಸ ಆಗಬೇಕೆಂದರು.”
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ,”ಕಾವ್ಯ ಅನುಭವದ ಓದಿನಿಂದ ಪಕ್ವವಾಗಬೇಕು.ಕವಿತೆ ಪ್ತಾಸ ಬದ್ದವಾಗಿ,ಸರವಾಗಿ ಇದ್ದಾಗ ಮಾತ್ರ ಜನರನ್ನು ತಲುಪಲು ಸಾಧ್ಯ ಎಂದರು.”
ಮಲೆನಾಡು ಕೃಷಿ ಅಭಿವೃದ್ದಿ ಸಹಕಾರಿ ಸಂಘದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ,ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪ್ರಮೋದ ಹೆಗಡೆ ವೇದಿಕೆ ಯಲ್ಲಿದ್ದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆ ಆಶಯ ನುಡಿದರು.
ಕವಿಗೋಷ್ಠಿಯಲ್ಲಿ ಕವಿಗಳಾದ ಡಾ.ರಾಜು ಹೆಗಡೆ ಶಿರಸಿ,ಸಿಂಧುಚAದ್ರ ಹೆಗಡೆ,ಫಾಲ್ಗುಣ ಗೌಡ ಅಂಕೋಲಾ,ರೇಣುಕಾ ರಮಾನಂದ ಅಂಕೋಲಾ,ಸುಬ್ರಾಯ ಬಿದ್ರೆಮನೆ,ಗಣಪತಿ ಬಾಳೆಗದ್ದೆ,ಮುಕ್ತಾಶಂಕರ,ನಾಗರೇಖಾ ಗಾಂವ್ಕಾರ,ಡಾ.ರವೀAದ್ರ ಭಟ್ಟ ಸೂರಿ,ಕೃಷ್ಣಾನಂದ ಬಾಂದೇಕರ,ರತ್ನಾ ಪಟಗಾರ,ವಿಠ್ಠಲ್ ನಾಯ್ಕ,ನಾಗರಾಜ ಅರ್ಕಸಾಲಿ,ಕಾಳಿದಾಸ ಬಡಿಗೇರ,ಸುಕನ್ಯಾ ದೇಸಾಯಿ,ಕವಿತೆ ವಾಚಿಸಿದರು.
ನಾಗೇಶಕುಮಾರ ನಿರೂಪಿಸಿದರು

error: