April 28, 2024

Bhavana Tv

Its Your Channel

ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸಬೇಕು: ಎಸಿ ದೇವರಾಜ್

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಜ್ಯೋತಿಷ್ಯವನ್ನು ವೈಜ್ಞಾನಿಕವಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಹಾಯಕ ಆಯುಕ್ತ ದೇವರಾಜ ಆರ್. ಎಂದರು.
ಅವರು ಸೋಮವಾರ ಜಾಗತಿಕ ಪರಿಸರ ದಿನವಾದ ಮಾ.21ರಂದು ಸೂರ್ಯ ಭೂ ಮಧ್ಯ ರೇಖೆಯ ಮೇಲೆ ಬರುವುದರಿಂದ ಭಾರತೀಯ ಜ್ಞಾನ ವಿಜ್ಞಾನ ಪರಿಷತ್, ಸುಮೇರು ಜ್ಯೋತಿರ್ವನಮ್ ಉಮ್ಮಚಗಿ ನೇತೃತ್ವದಲ್ಲಿ ಜಿಲ್ಲೆಯ ಶಿರಸಿ, ಯಲ್ಲಾಪುರ ವ್ಯಾಪ್ತಿಯ ಅಕ್ಷಾಂಶ ತಿಳಿದುಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈಜ್ಞಾನಿಕ ಜ್ಯೋತಿಷ್ಯವನ್ನು ಇಲ್ಲಿಗೇ ಸೀಮಿತವಾಗದೇ ಇದನ್ನು ವಿಸ್ತರಿಸುವ ಕಾರ್ಯ ಆಗಬೇಕು. ಭಾರತೀಯರ ರಾಶಿ, ನಕ್ಷತ್ರ, ಜೋತಿಷ್ಯಕ್ಕೂ, ವಿಜ್ಞಾನ ಕ್ಕೂ ಸಂಬAಧ ಇದೆ. ನಮ್ಮ ದಿನನಿತ್ಯದ ಜೀವನದಲ್ಲಿ ತಿಳಿದುಕೊಳ್ಳಲು ನಾವು ನಿಂತಲ್ಲೇ ನೋಡಲು ಸಾಧ್ಯವಿದೆ ಎಂದರು.
ನಕ್ಷತ್ರಗಳಿಗೆ, ಗೃಹ, ರಾಶಿಗಳಿಗೆ ಆಯಾ ಗಿಡಗಳಿಗೆ ಸಂಬAಧಿಸಿ ಆಳವಾದ ಅಧ್ಯಯನ ನಡೆಸಿ ಜೋತಿಷ್ಯದ ಮೂಲಕ ಜೋಡಿಸಲಾಗಿದೆ. ಅದರ ಗ್ರಂಥಗಳೂ ಬರಬೇಕು ಎಂದೂ ಸಲಹೆ ಮಾಡಿದರು.
ಅಧ್ಯಕ್ಷತೆವಹಿಸಿದ್ದ ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಜ್ಯೋತಿಷ್ಯದಲ್ಲಿ ಅರಬರೆ ಕಲಿತು ಹೇಳುವದು ಅಪಾಯವಿದೆ. ಅಲ್ಪ ಕಲಿತು ಜೋತಿಷ್ಯ ಹೇಳಿದರೆ ನಂಬಿಕೆಯಿAದ ಕೇಳಿದವರ ಬದುಕು ನಿಂತು ಹೋಗುತ್ತದೆ. ಸರಿಯಾಗಿ ಕಲಿತು ಹೇಳಿದರೆ ಅದರ ಪರಿಣಾಮ ಕೇಳಿದ ವ್ಯಕ್ತಿಗೆ ಉನ್ನತ ಆಗುತ್ತದೆ ಎಂದರು.
ಪ್ರಸಿದ್ಧ ಜೋತಿಷಿ ಡಾ. ಕೆ.ಸಿ.ನಾಗೇಶ, ಭೂ ಮಧ್ಯ ರೇಖೆಯಿಂದ ಅಕ್ಷಾಂಶ 14 ಅಂಶ 58 ಕಲೆ (ನಿ) ದಾಖಲಾಗಿದೆ. ಜ್ಯೋತಿಷ್ಯ ವೈಜ್ಞಾನಿಕ ವಿಧಾನದ ಇಲ್ಲಿನ ಕುಟೀರ ದಲ್ಲಿ ಆಯಾ ರಾಶಿ, ನಕ್ಷತ್ರಕ್ಕೆ ಸಂಬAಧಿಸಿದ ಹವನ ಕೂಡ ಮಾಡಲಾಗುತ್ತದೆ. ಶೈಕ್ಷಣಿಕ ಪ್ರವಾಸ ಕೇಂದ್ರ ಕೂಡ ಆಗಬೇಕು. ಮಕ್ಕಳಿಗೆ ಕನಿಷ್ಠ 48 ಜಾತಿ ಗಿಡ ಪರಿಚಯ ಆಗುತ್ತದೆ. ಅವರವರ ರಾಶಿ, ನಕ್ಷತ್ರಕ್ಕೆ ಸಂಬAಧಿಸಿ ಗಿಡ ಯಾವುದು ಎಂದೂ ಗೊತ್ತಾಗುತ್ತದೆ ಎಂದರು.
ಸಭೆಯಲ್ಲಿ ಯಲ್ಲಾಪುರ ತಹಸೀಲ್ದಾರ ಶ್ರೀಕೃಷ್ಣ ಕಾಮಕರ, , ವೈದ್ಯ ಡಾ. ನಿರಂಜನ ಹೊಸಬಾಳೆ, ಉಮ್ಮಚಗಿ ಪಂಚಾಯ್ತಿ ಅಧ್ಯಕ್ಷೆ ರೂಪಾ ಪೂಜಾರಿ, ಶ್ರೀಮಾತಾ ಸಂಸ್ಕ್ರತ ಪಾಠಶಾಲೆಯ ಅಧ್ಯಕ್ಷ ಪಿ.ವಿ.ಹೆಗಡೆ, ಪ್ರಾಚಾರ್ಯ ಡಾ. ನಾಗೇಶ ಭಟ್ಟ, ನಾಗರಾಜ್ ಭಟ್, ವಿದ್ವಾಂಸ ಸೀತಾರಾಮ ಭಟ್ಟ ಇತರರು ಇದ್ದರು.
ಗಣೇಶ ಎನ್.ಭಟ್ಟ ಪ್ರಸ್ತಾವಿಕ ಮಾತನಾಡಿದರು.
ಪುಷ್ಕರ ಕೆ.ಎನ್ ಪ್ರಾರ್ಥಿಸಿದರು. ಡಾ. ನಿವೇದಿತಾ ಭಟ್ಟ ಸ್ವಾಗತಿಸಿದರು. ಗಣೇಶ ಭಟ್ಟ ನಿರ್ವಹಿಸಿದರು.

ಶಿರಸಿ ಯಲ್ಲಾಪುರ ರಸ್ತೆಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನ ನಿರ್ಮಾಣ ಮಾಡಲಾಗಿದೆ.
ಶಾಸ್ತ್ರಗಳಲ್ಲಿ ಹೇಳಲಾದ ಸಂಗತಿಯನ್ನು ಗುಡ್ಡದ ನೆತ್ತಿಯ ಮೇಲೆ ನೂತನವಾಗಿ ನಿರ್ಮಾಣ ಮಾಡಲಾದ ನಕ್ಷತ್ರ, ರಾಶಿ ವನ ಇದಾಗಿದೆ. ಈ ಮೂಲಕ ನಮ್ಮ ಪರಂಪರೆಯನ್ನು
ಸಮಾಜದ ಮುಂದೆ ಇಡುವ ಪ್ರಯತ್ನ ಇದಾಗಿದೆ. ವೈಜ್ಞಾನಿಕ ಮಾದರಿಯ ನವಗ್ರಹ ಕುಠೀರ ಕೂಡ ನಿರ್ಮಾಣ ಮಾಡಲಾಗಿದೆ.- ಡಾ. ಕೆ.ಸಿ.ನಾಗೇಶ, ಪ್ರಸಿದ್ಧ ಜ್ಯೋತಿರ್ವಿಜ್ಞಾನಿಗಳು.

error: