
ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಅನುಷ್ಟಾನದಲ್ಲಿ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಹಕ್ಕಿನಿಂದ ವಂಚಿತರಾಗಿದ್ದಾರೆ. ರಣ್ಯವಾಸಿಗಳ ಪರ ತೀವ್ರತರ ಜಾಗೃತ ಮೂಡಿಸಲಾಗುವುದು ಎಂದು ಅರಣ್ಯ
ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಇಂದು ಯಲ್ಲಾಪುರ ತಾಲೂಕಿನ ಮಲವಳ್ಳಿ , ವಜ್ರಳ್ಳಿ ವಲಯದ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾನೂನಿಗೆ ವ್ಯತಿರಿಕ್ತವಾಗಿ ಹಾಗೂ ಕಾನೂನಿನ ವಿಧಿ-ವಿಧಾನವನ್ನ ಅನುಸರಿಸದೇ ಅರಣ್ಯವಾಸಿಗಳ ಅರ್ಜಿಗಳನ್ನ ತೀರಸ್ಕರಿಸಲಾಗಿದೆ. ಸರಕಾರ ತೀವ್ರ ಗಮನ ಹರಿಸಬೇಕು. ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳು ರಾಜ್ಯದ ಇನ್ನೀತರ ಜಿಲ್ಲೆಗಳ ಸಮಸ್ಯೆಗಳಿಗಿಂತ ಭಿನ್ನವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಗಣಪತಿ ಗೌಡ, ಸ್ವಾಗತವನ್ನ ಅನಂತ ಎಸ್ ಗೌಡ, ಪ್ರಾಸ್ತವಿಕವನ್ನ ಶ್ರೀಪಾದ ಎನ್ ಭಟ್ಟ ಮಾಡಿದರು. ಸಭೆಯಲ್ಲಿ ಮಾಚಣ್ಣ ವರದಮನಿ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು, ಮಾಚಣ್ಣ ಹಲಗುಮನೆ
ಗ್ರಾಮ ಪಂಚಾಯಿತಿ ಸದಸ್ಯ, ರಾಘವೇಂದ್ರ ಕುಣಬಿ ಗ್ರಾಮ ಪಂಚಾಯಿತಿ ಸದಸ್ಯ, ಕಾರ್ಯಕ್ರಮದ ಸಂಘಟಕರು ಅನಂತ ಎಸ್ ಗೌಡ, ಸತ್ಯನಾರಾಯಣ ಹೆಗಡೆ, ಪ್ರಭಾಕರ ಕುಣಬಿ, ಸತೀಶ ಮರಾಠಿ, ಜಿಆರ್ ಗಾಂವಕರ ಕಾನೂರು
ಮುಂತಾದವರು ಉಪಸ್ಥಿತರಿದ್ದರು.
ನೈತಿಕ ಸ್ಥೇರ್ಯ ಹೆಚ್ಚಿಸಿದೆ :
ಅರಣ್ಯವಾಸಿಗಳನ್ನ ಉಳಿಸಿ- ಜಾಥವು ಅರಣ್ಯವಾಸಿಗಳಿಗೆ ಕಾನೂನಾತ್ಮಕ ಮತ್ತು ಸಂಘಟನಾತ್ಮಕವಾಗಿ ಅರಣ್ಯವಾಸಿಗಳ ನೈತಿಕ ಸ್ಥೇರ್ಯ ಹೇಚ್ಚಿಸಿದೆ. ಮುಂದಿನ ರಚನಾತ್ಮಕ ಹೋರಾಟದ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಸಾದ್ಯ ಎಂದು ರವೀAದ್ರ ನಾಯ್ಕ ಹೇಳಿದರು

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ