May 19, 2024

Bhavana Tv

Its Your Channel

ಯುಗಾದಿ ಉತ್ಸವ ಉಪನ್ಯಾಸ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ ; ಭಾರತೀಯ ಕಾಲಮಾನವೆಂಬುದು ಜಗತ್ತಿನಲ್ಲಿಯೇ ಶ್ರೇಷ್ಠವಾದುದ್ದು.ಪಂಚ ಅಂಗಗಳಿAದ ಕೂಡಿದ ಭಾರತೀಯ ಕಾಲ ಮಾನಗಣನೆಯು ಗ್ರಹಗಳ ಚಲನೆಯನ್ನು ಆಧರಿಸಿ ಇರುವಂತದ್ದಾದ್ದರಿAದ ನೈಸರ್ಗಿಕವಾದುದಾಗಿದೆ, ಕೃತಕವಾದ ಯಾವುದೇ ಅಂಶಗಳೂ ಇದರಲ್ಲಿ ಇಲ್ಲ ಎಂದು ಡಾ ನರಸಿಂಹ ಭಟ್ಟ ಕವಡಿಕೇರಿ ಹೇಳಿದರು.
ಅವರು ತಾಲೂಕಿನ ಗುಳ್ಳಾಪುರ ಸಮೀಪದ ಹೆಗ್ಗಾರಿನಲ್ಲಿ ಅರುಣೋದಯ ಯುವಕ ಸಂಘ ಹಾಗೂ ಕಸ್ತೂರಬಾ ಯುವತಿ ಸಂಘದ ಆಶ್ರಯದಲ್ಲಿ ಬಲಮುರಿ ಗಣಪತಿ ದೇವಸ್ಥಾನ ಆವಾರದಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಉಪನ್ಯಾಸ ನೀಡುತ್ತಿದ್ದರು. ಭಾರತವೆಂಬುದು ಬಹು ದೇವೋಪಾಸನೆಯ ದೇಶ.ಎಲ್ಲರಿಗೂ ಸಹ ತಮಗಿಷ್ಟವಾದ ದೇವರನ್ನು ಆರಾಧಿಸುವ ಅವಕಾಶ ಇದೆ, ಅದೇ ಕಾರಣದಿಂದ ಭಾರತದಲ್ಲಿ ವೈವಿಧ್ಯಮಯವಾದ ಸಂಪ್ರದಾಯಗಳು ನೆಲೆಯೂರಿವೆ, ಹಿಂದೂ ಧಾರ್ಮಿಕ ಆಚರಣೆಗಳನೇಕವು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಅರ್ಥಗಳನ್ನು ಹೊಂದಿವೆ ಎಂದರು. ವೇ.ವಿ ಎನ್ ಭಟ್ಟ ಪಂಚಾAಗ ಪಠಣ ನಡೆಸಿಕೊಟ್ಟರು. ನಾರಾಯಣ ಭಟ್ಟ ಆಶಯ ನುಡಿಗಳನ್ನಾಡಿದರು. ನಂತರ ಕಲಾವಿದ ಶಿವರಾಮ ಭಾಗ್ವತ ಹೆಗ್ಗಾರ, ರಾಜೇಂದ್ರ ಭಾಗ್ವತ ಹಾಗೂ ಸತೀಶ ಹೆಗ್ಗಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಸನ್ನ ಭಾಗ್ವತ ಸ್ವಾಗತಿಸಿದರು, ಸುಧಾಕರ ಭಟ್ ಹಾಗೂ ಗಾಯತ್ರಿ ಕಲಗಾರೆ ನಿರೂಪಿಸಿದರು, ರಾಮಕೃಷ್ಣ ಗಾಂವ್ಕರ ವಂದಿಸಿದರು.

error: