May 6, 2024

Bhavana Tv

Its Your Channel

ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ :- ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ಪೂರೈಸಲಾಗಿದೆ.ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುತ್ತಿದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಹೇಳಿದರು.ಅವರು ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಪಕ್ಷದ ಸಂಘಟನೆ, ಬಿಜೆಪಿ ಸರಕಾರದ ಲೋಪದೋಷವನ್ನು ಜನರಿಗೆ ಕಾರ್ಯಕರ್ತರಿಗೆ ತಿಳಿಸಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಪಟ್ಟಣದಲ್ಲಿ ಬಹಳ ವರ್ಷಗಳಿಂದ ಆಗದೇ ಇರುವ ಗೂಡಂಗಡಿಕಾರರ ಸಮಸ್ಯೆಯಿಂದ ಬಡ ಅಂಗಡಿಕಾರರು ಬೀದಿಗೆ ಬಿದ್ದಿದ್ದಾರೆ. ಅವರಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು. ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಪ್ಲಡ್‌ನ 15 ಕೋಟಿ ಹಣವನ್ನು ಅವಶ್ಯಕತೆ ಇದ್ದಲ್ಲಿ ಬಳಸದೇ, ತಮಗೆ ಬೇಕಾದಲ್ಲಿ ಬಳಸಲಾಗಿದೆ, ರಸ್ತೆ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿದರು.

ತಾಲೂಕಿನಲ್ಲೇ ಸಚಿವರು ಇದ್ದರೂ ವಿದ್ಯುತ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಇಲ್ಲದಿದ್ದರಿಂದ ಯಜಮಾನ ಇಲ್ಲದ ಮನೆಯಾಗಿದೆ. ಕೆಳ ವರ್ಗದ ಅಧಿಕಾರಿಗಳ ದರ್ಬಾರವಾಗಿದೆ.ಅರ್ಜಂಟ ಕೆಲಸಗಳಿಗೆ ತೊಂದರೆಯಾಗಿದೆ. ಎ.ಇ.ಇ.ಯವರು ವಾರಕ್ಕೊಮ್ಮೆ ಬಂದರೂ ಪೂರ್ತಿ ಕಾಮಗಾರಿಗಳ ಪರಿಶೀಲನೆ ಮಾಡಲಿಕ್ಕೆ ಆಗುವದಿಲ್ಲ. ಕೆಳ ವರ್ಗದ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುಲು ಆಗದೆ ಚಡಪಡಿಸುತ್ತಿದ್ದಾರೆ. ಮಂಚಿಕೇರಿ ಶಾಖಾಧಿಕಾರಿಗಳಿಗೆ ವರ್ಗಾವಣೆ ಮಾಡಿ ಬಿಡುಗಡೆಗೊಳಿಸಿದ್ದಾರೆ.ಆ ಜಾಗಕ್ಕೆ ಯಾರನ್ನು ನಿಯುಕ್ತಿಗೊಳಸಿರುವದಿಲ್ಲ.ಮುಂದೆ ಮಳೆಗಾಲ ಬಂದಿದ್ದರಿAದ ಕೂಡಲೇ ಆ ಜಾಗಕ್ಕೆ ಜೆ.ಇಯವರನ್ನು ನೇಮಿಸಬೇಕು.ಕೊರತೆ ಇರುವ ಸಿಬ್ಬಂದ್ದಿಗಳ ಬರ್ತಿ ಆಗಬೇಕು ಎಂದರು. ಅನೇಕ ಇಲಾಖೆಯಲ್ಲಿ ಇನ್ ಚಾರ್ಜ್ ಇದ್ದವರು ದರ್ಬಾರವನ್ನು ಯಾರು ಕೇಳುವವರಿಲ್ಲ.

ಹಿರಿಯ ಮುಖಂಡ ಎನ್.ಕೆ.ಭಟ್ಟ ಮೆಣಸುಪಾಲ ಮಾತನಾಡಿ, ಕೇಂದ್ರಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ.ರಾಜ್ಯ ಸರ್ಕಾರ ಕಳೆದ ವರ್ಷ ಬೆಳೆ ವಿಮೆ ಇನ್ನೂ ನೀಡಿಲ್ಲ.ದಿಲ್ಲಿಯಲ್ಲಿ ರೈತರು ಹೋರಾಡಿ ಸತ್ತರೂ ಬೆಲೆಯೇ ಇಲ್ಲ. ಡಬಲ್ ಇಂಜಿನ್ ಸರಕಾರ ಇದ್ದರೂ, ರೈತರ ಸಮಸ್ಯೆ ಕೇಳುವರೇ ಇಲ್ಲ ಎಂದರು. ಜಿಲ್ಲಾ ಸಮಿತಿಯ ಸದಸ್ಯ ಉಲ್ಲಾಸ ಶಾನಭಾಗ ಮಾತನಾಡಿ, 3 ದಶಕಗಳಿಂದ ಆರ್.ವಿ. ದೇಶಪಾಂಡೆ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಕಾರ್ಮಿಕ ಸಚಿವರು ಹೇಳಿಕೆ ನೀಡಿದ್ದು, ಅವರು ಕಾಂಗ್ರೆಸ್ ಶಾಸಕರಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮರೆತಿದ್ದಾರೆಯೇ
ಎಂದು ಪ್ರಶ್ನಿಸಿದರು.
ಮೂರು ವರ್ಷದ ಅವಧಿಯಲ್ಲಿ ಬಿಜೆಪಿಯಿಂದ ಸಚಿವರಾಗಿ ಯಾವ ಅಭಿವೃದ್ದಿ ಮಾಡಿದ್ದಾರೆಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಟಿ.ಸಿ.ಗಾಂವ್ಕಾರ, ಸೂರ್ಯನಾರಾಯಣ ಭಟ್, ಅನಿಲ ಮರಾಠೆ, ದಿಲೀಪ ರೊಖಡೆ ಮಂಚಿಕೇರಿ, ಎನ್.ಎನ್.ಹೆಬ್ಬಾರ್ ಕಳಚೆ, ಅನಿಲ ನಾಯ್ಕ ಚಿನ್ನಾಪುರ, ಬೇಬಿ ಅಮೀನಾ ಶೇಖ್, ಸರಸ್ವತಿ ಗುನಗಾ, ಪೂಜಾ ನೇತ್ರೇಕರ್, ಮುಂತಾದವರು ಉಪಸ್ಥಿತರಿದ್ದರು.

error: