May 6, 2024

Bhavana Tv

Its Your Channel

“ಓದುವ ಆಸಕ್ತರಿಗೆ ಅವಕಾಶ ಕಲ್ಪಿಸುವುದು ವಿಶ್ವದರ್ಶನದ ಧ್ಯೇಯ”- ನರಸಿಂಹ ಕೋಣೆಮನೆ.

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ; ಪ್ರತಿಭಾವಂತರು ಮತ್ತು ಪ್ರಯತ್ನಶೀಲರು ಅವಕಾಶ ವಂಚಿತರಾಗಬಾರದು ಸೂಕ್ತವಾದ ಅವಕಾಶ ಕಲ್ಪಿಸಿ ಅಧ್ಯಯನಶೀಲ ಮಕ್ಕಳಿಗೆ ಸಹಕಾರ ನೀಡುವುದು ಸಮಾಜದ ಕರ್ತವ್ಯವಾಗಿದೆ. ಈ ಕಾರ್ಯವನ್ನು ನಮ್ಮ ಸಂಸ್ಥೆ ಕೈಗೆತ್ತಿಕೊಂಡು ವಿಶ್ವದರ್ಶನ ಕರಿಯರ್ ಅಕಾಡೆಮಿ ಮತ್ತು ಪದವಿ ಪೂರ್ವ ಕಾಲೇಜುಗಳು ತರಬೇತಿಯನ್ನು ನೀಡುತ್ತಿರುವುದು ಆನಂದದ ಸಂಗತಿಯಾಗಿದೆ ಎಂದು ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ನುಡಿದರು.
ಅವರು ಕೆ.ಸಿ.ಇ.ಟಿ ಮತ್ತು ನಿಟ್ ತರಬೇತಿ ಶಿಬಿರವನ್ನು ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿದರು. ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದುವುದಾದರೆ ನಾವು ಉತ್ತಮ ಅವಕಾಶಗಳನ್ನು ತೆರೆಯಲು ಸಿದ್ಧ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಿ ಯು ಕಾಲೇಜಿನ ಪ್ರಾಚಾರ್ಯರಾದ ಡಾ. ದತ್ತಾತ್ರೇಯ ಗಾಂವ್ಕರ್ ರವರು ಓದುವುದಕ್ಕೆ ಇರುವ ದಿನಗಳನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಸಂದೇಶ ನೀಡುತ್ತಾ ಸಂಸ್ಥೆಯ ಸಂಕಲ್ಪದAತೆ ವಿದ್ಯಾರ್ಥಿಗಳ ಮತ್ತು ಪಾಲಕರ ಕ್ಷೇಮವೇ ನಮ್ಮ ಧ್ಯೇಯ ಎಂದು ತಿಳಿಸಿದರು. ಸಚಿನ್ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿನಾಯಕ ಭಟ್ಟ ಹಾಗೂ ಪ್ರಸನ್ನ ಭಟ್ಟ ಕಾರ್ಯಕ್ರಮವನ್ನು ಸಂಯೋಜಿಸಿದರು.
ವಿಜಯಶ್ರೀ ಗಾಂವ್ಕರ ವಂದನೆ ಸಲ್ಲಿಸಿದರು. ವಿಶ್ವದರ್ಶನ ಅಂಗಸAಸ್ಥೆಗಳ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

error: