
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ: ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಪ್ರೇರಣಾ ಶಿಬಿರ ಮತ್ತು ಸಂವಹನ ಕಾರ್ಯಕ್ರಮವು ಪದವಿಪೂರ್ವ ಕಾಲೇಜಿನ ಆವಾರದಲ್ಲಿ ನಡೆಯಿತು. ಕನ್ನಡ ಸಾಹಿತ್ಯದ ಮೇರು ಬರಹಗಾರರಾದ ಶ್ರೀಧರ ಬಳಗಾರ ಅವರು ಶಿಕ್ಷಣ ಮತ್ತು ಉಪನ್ಯಾಸಕರ ಹೊಣೆ ವಿಷಯದ ಕುರಿತು ಉಪನ್ಯಾಸ ನೀಡಿದರು.ವಿದ್ಯಾರ್ಥಿಯ ಪೂರ್ವ ಕಲಿಕೆಯನ್ನು ಅರಿಯುತ್ತಾ ಪಠ್ಯ ಸಂವಹನ ಮಾಡಿ ಮತ್ತು ವಿದ್ಯಾರ್ಥಿಯ ಮಾನಸಿಕ ವಿಕಾಸವೇ ಶಿಕ್ಷಣದ ಉದ್ದೇಶವಾಗಿದೆ ಎಂದು ವಿವರಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಪಠ್ಯ, ಶಿಕ್ಷಕ, ವಿದ್ಯಾರ್ಥಿ, ಮೌಲ್ಯಮಾಪನ, ಮೊದಲಾದ ಕ್ಷೇತ್ರಗಳ ಪಾರಂಪರಿಕ ಮತ್ತು ಆಧುನಿಕ ಬೋಧನಾ ವಿಷಯಗಳ ಬಗೆಗೆ ಉಪನ್ಯಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಯವರ ಶೈಕ್ಷಣಿಕ ಆದರ್ಶಗಳು ಉಪನ್ಯಾಸಕರಿಂದ ಈಡೇರಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ ದತ್ತಾತ್ರೇಯ ಗಾಂವ್ಕರ, ಸಂಯೋಜಕರಾದ ಪ್ರಸನ್ನ ಭಟ್ ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಶಿಬಿರದಲ್ಲಿ ಭಾಗಿಯಾಗಿದ್ದರು. ಸಭೆಯ ನಿರ್ವಹಣೆಯನ್ನು ಕವಿತಾ ಹೆಬ್ಬಾರ ಹಾಗೂ ವಂದನಾರ್ಪಣೆಯನ್ನು ನಾಗರಾಜ ಹೆಗಡೆ ನಡೆಸಿಕೊಟ್ಟರು.ವಿನಾಯಕ ಭಟ್ ಪ್ರೇರಣಾ ಶಿಬಿರವನ್ನು ಆಯೋಜಿಸಿದ್ದರು.
ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ನಡೆಸಲಾಯಿತು ನಿವೃತ್ತ ಉಪನ್ಯಾಸಕರು, ಚಿಂತಕರು, ಶಿಕ್ಷಣತಜ್ಞರು ಆದ ಶ್ರೀಧರ ಬಳಗಾರವರು ವಿವೇಕಾನಂದರ ಶೈಕ್ಷಣಿಕ ಕೊಡುಗೆಗಳು ವಿಷಯವಾಗಿ ಉಪನ್ಯಾಸವನ್ನು ಬಿ ಇಡಿ. ತರಗತಿಯ ವಿದ್ಯಾರ್ಥಿಗಳಿಗೆ ನೀಡಿದರು.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾಕ್ಟರ ಶಂಕರನಾರಾಯಣ ಭಟ್ ಹಾಗೂ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಉಪಸ್ಥಿತರಿದ್ದರು. ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ