May 6, 2024

Bhavana Tv

Its Your Channel

ಅಂಚೆ ಸೇವಕರಾಗಿ ಸೇವೆ ಸಲ್ಲಿಸಿದ ದತ್ತಾತ್ರಯ ಭಟ್ಟ ಗೆ ಬೀಳ್ಕೊಡುಗೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಅಂಚೆ ಇಲಾಖೆಯಲ್ಲಿ ಕಳೆದ ಮೂವತ್ತೇಳು ವರ್ಷಗಳ ಸುದೀರ್ಘ ಕಾಲ ಗ್ರಾಮೀಣ ಅಂಚೆ ಸೇವಕರಾಗಿ ಸೇವೆ ಸಲ್ಲಿಸಿದ ಪಟ್ಟಣದ ಕಾಳಮ್ಮಾನಗರದ ದತ್ತಾತ್ರಯ ಗಜಾನನ ಭಟ್ಟ ಅವರನ್ನು ಬುಧವಾರ ಟಿಳಕಚೌಕಬಳಿ ಇರುವ ಉಪ ಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ದತ್ತಾತ್ರಯ ಭಟ್ಟ ಅವರು ಅಂಚೆ ಇಲಾಖೆಯಲ್ಲಿ ದಕ್ಷತೆ,ಪ್ರಾಮಾಣಿಕತೆಯಿಂದ ಸೇವೆಸಲ್ಲಿಸುವ ಮೂಲಕ ಎಲ್ಲರ ಪ್ರೀತ್ಯಾಧಾರಗಳಿಗೆ ಪಾತ್ರರಾಗಿ”ಪೋಸ್ಟ್ ದತ್ತಣ್ಣ”ಎಂದೇ ಚಿರಪರಿಚಿತ ರಾಗಿದ್ದಾರೆ. ಹುತ್ಕಂಡದಲ್ಲಿ ಹದಿನೈದುವರ್ಷ ಹಾಗೂ ಪಟ್ಟಣದ ಅಂಚೆ ಕಛೇರಿಯಲ್ಲಿ 22 ವರ್ಷ ಸೇವೆಸಲ್ಲಿಸುವ ಮೂಲಕ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿದ್ದಾರೆ.
ಅಂಚೆ ಇಲಾಖೆಯ ದಾಂಡೇಲಿ ಉಪವಿಭಾಗದ ಅಂಚೆ ನಿರೀಕ್ಷಕ ರಾಯಲ್ ಭಾರ್ತಿ ದತ್ತಾತ್ರಯ ಭಟ್ಟ ದಂಪತಿಗಳನ್ನು ಗೌರವಿಸಿ,ಅಂಚೆ ಇಲಾಖೆಯಲ್ಲಿ ನಿಮ್ಮ ಸೇವೆ ಅನುಪಮವಾದದ್ದು,ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಉಪ ಅಂಚೆ ವ್ಯವಸ್ಥಾಪಕ ಸುಬ್ರಾಯ.ವಿ.ಗಾಂವ್ಕಾರ ಅವರಿಗೆ ಮಂಚಿಕೇರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಿ ಬಿಳ್ಕೋಡಲಾಯಿತು.
ಅಂಚೆಕಚೇರಿಯ ಅಂಚೆ ವ್ಯವಸ್ಥಾಪಕಿ ಜ್ಯೋತಿ ಬಳಿಗಾರ,ಹಾಗೂ ಅಂಚೆ ಕಚೇರಿಯ ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.

error: