May 6, 2024

Bhavana Tv

Its Your Channel

ಇಂದಿನ ದಿನಗಳಲ್ಲಿ ರೈತರಿಗೆ ಯಂತ್ರೋಪಕರಣಗಳ ಬಳಕೆ ಅವಶ್ಯವಾಗಿದೆ-ಗುರುಪ್ರಸಾದ ಭಟ್ಟ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ರೈತರಿಗೆ ಕೂಲಿಕಾರರ ಕೊರತೆ ಪ್ರತಿ ಊರಿನಲ್ಲೂ ಇರುವುದರಿಂದ ಕೃಷಿ ಕೆಲಸ ಕಾರ್ಯದಲ್ಲಿ ಹೊಸ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಹಾಗಾಗಿ ಕೊನೆ ಕೊಯ್ಲು ಮತ್ತು ಮದ್ದು ಸಿಂಪರಣೆಗೆ ಈ ಕಾರ್ಬನ್ ಫೈಬರ್ ದೋಟಿಯು ಅನುಕೂಲವಾಗಿರುತ್ತದೆ. ಈ ಭಾಗದ ಕೃಷಿಕರಿಗೆ ಅನುವಾಗಲೆಂಬ ಉದ್ದೇಶದಿಂದ ನಮ್ಮ ಸಂಘವು ದೋಟಿಗಳನ್ನು ಬಾಡಿಗೆಗೆ ಬಿಡುವ ವ್ಯವಸ್ಥೆ ಮಾಡಿರುತ್ತದೆ ಎಂದು ಶ್ರೀ ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆ (ರಿ) ಉಮ್ಮಚ್ಗಿಯ ಅಧ್ಯಕ್ಷ ಗುರುಪ್ರಸಾದ ಭಟ್ಟ ಅವರು ಮಾತನಾಡುತ್ತ ಹೇಳಿದರು.
ಜಿಲ್ಲಾ ಪಂಚಾಯತ ಉತ್ತರಕನ್ನಡ,ಗ್ರಾಮ ಪಂಚಾಯತ ಹಾಸಣಗಿ, ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾಸಹಕಾರಿ ಸಂಘ,ಶ್ರೀ ಸರ್ವಜ್ಞೇಂದ್ರ ರೈತ ಉತ್ಪಾದಕ ಸಂಸ್ಥೆ (ರಿ) ಉಮ್ಮಚ್ಗಿ, ತೋಟಗಾರಿಕಾ ಇಲಾಖೆ ಯಲ್ಲಾಪುರ, ಕೃಷಿ ಇಲಾಖೆ ಯಲ್ಲಾಪುರ ಇವರುಗಳ ಸಹಯೋಗದಲ್ಲಿ 2022-23 ನೇ ಸಾಲಿನ ಆತ್ಮ ಯೋಜನೆಯ ಅಡಿ ಹಾಸಣಗಿ ಪಂಚಾಯತ ವ್ಯಾಪ್ತಿಯ ಹೊನ್ನಳ್ಳಿ ಮೋಹನ ಭಟ್ಟರ ತೋಟದಲ್ಲಿ ನಡೆದ ಕಾರ್ಬನ್ ಫೈಬರ್ ದೋಟಿ ಮೂಲಕ ಮದ್ದು ಸಿಂಪರಣೆ ಪ್ರಾತ್ಯಕ್ಷಕೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ತೋಟಗಾರಿಕಾ ಇಲಾಖೆಯು ಸರಕಾರದಿಂದ ಮಾನ್ಯತೆ ಪಡೆದ ಕಂಪನಿಗಳ ಕಾರ್ಬನ್ ಫೈಬರ್ ದೋಟಿ ಖರೀದಿಸುವವರಿಗೆ ಸಬ್ಸಿಡಿ ವ್ಯವಸ್ಥೆ ಮಾಡಿಕೊಡುತ್ತದೆ.
ಈ ದೋಟಿಗಳು ಕೊನೆ ಕೊಯ್ಲು ಮತ್ತು ಮದ್ದು ಸಿಂಪರಣೆಗೆ ಹೆಚ್ಚು ಅನುಕೂಲವಾಗಿದ್ದು, ಇದರ ಉಪಯೋಗದಿಂದ ರೈತರು ಹಣ ಮತ್ತು ಶ್ರಮ ಎರಡರ ವ್ಯಯವನ್ನೂ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಸತೀಶ ಹೆಗಡೆಯವರು ಇದೇ ಸಂದರ್ಭದಲ್ಲಿ ಮಾತನಾಡುತ್ತ ಹೇಳಿದರು. ಅರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಟಿ.ಎಸ್. ಎಸ್.ನ ಸಂದೇಶ ಭಟ್ಟ, ಪ್ರಸನ್ನ ಹೆಗಡೆ, ಕೃಷ್ಣ ಭಟ್ಟ ಆನ್ಗೋಡ ಭಾಗವಹಿಸಿದ್ದರು.ಹಾಸಣಗಿ ಸೇವಾಸಹಕಾರಿ ಸಂಘದ ಉಪಾಧ್ಯಕ್ಷ, ಟಿ.ವಿ.ಹೆಗಡೆ ಬೆದೆಹಕ್ಲು, ತೋಟಗಾರಿಕಾ ಇಲಾಖೆಯ ಹೀನಾ ಮೇಡಂ,ಕೀರ್ತಿ ಹೆಗಡೆ, ಮೋಹನ್ ಭಟ್ಟ ಹೊನ್ನಳ್ಳಿ ಮೊದಲಾದವರು ಉಪಸ್ಥಿತರಿದ್ದರು

error: