
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಯಲ್ಲಾಪುರ ಇವರ ಆಶ್ರಯದಲ್ಲಿ ರವಿವಾರ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ 75 ವರ್ಷ ದಾಟಿದ ಸಂಘದ ಆಯ್ದ ಹಿರಿಯ ಸದಸ್ಯರಾದ ನಾಗೇಶ ನಾಯಕ,ಕುಸುಮಾವತಿ ಶೆಟ್ಟಿ,ಶಾಂತಾಬಾಯಿ ಧೀಕ್ಷಿತ್, ಎಂ.ಆರ್.ರಾಣೆಬೆನ್ನೂರು, ಎಸ್.ವೈ. ಗೊಂಧಳಿಯವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯರು ಒಂದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ತಾಯಿಬೇರು ಇದ್ದಂತೆ. ತಾಯಿಬೇರು ಇದ್ದರೆ ಮಾತ್ರ ಮರ ನಳನಳಿಸುವ ಹಾಗೆ ಸಮಾಜಕ್ಕೆ ಹಿರಿಯ ನಾಗರಿಕರ ಮಾರ್ಗದರ್ಶನ ಅತ್ಯಂತ ಅಗತ್ಯವೆಂದು ಮಾರ್ಮಿಕವಾಗಿ ನುಡಿದರು.
ಸ್ಟೇಟಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಶಾಖಾಧಿಕಾರಿ ವೆಂಕಟ ಸತ್ಯನಾರಾಯಣ ಮುಖ್ಯ ಅತಿಥಿಯಾಗಿ ಮಾತನಾಡಿ ಹಿರಿಯ ನಾಗರಿಕರಿಗೆ ಅವಶ್ಯ ಸೇವೆ ಸಲ್ಲಿಸಲು ತಮ್ಮ ಬ್ಯಾಂಕು ಸದಾ ಸಿದ್ಧ ಎಂದರು.
ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ನಾಯ್ಕ, ನಿವೃತ್ತರು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಸದಾ ಚಟುವಟಿಕೆಯಿಂದ ಇರಲು ಕರೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಶೋಭಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಎಸ್.ಎಲ್.ಜಾಲಿಸತ್ಗಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಂದಿಸಿದರು. ಸ್ಥಳೀಯ ಸ್ಟೇಟ್ ಬ್ಯಾಂಕಿನ ಸ್ಥಳೀಯ ಶಾಖೆಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರಂಭದಲ್ಲಿ ಇತ್ತೀಚಿಗೆ ಸ್ವರ್ಗಸ್ಥರಾದ ಸಂಘದ ಹಿರಿಯ ಸದಸ್ಯರುಗಳಾದ ಆರ್.ಡಿ.ನಾಯ್ಕ ಮತ್ತು ದೇಸಾಯಿ ಮಾಸ್ತರವರಿಗೆ ಸಭೆ ಶೃದ್ಧಾಂಜಲಿ ಅರ್ಪಿಸಿತು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ