May 6, 2024

Bhavana Tv

Its Your Channel

ಸರಕಾರದ ಅನೇಕ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು- ಸತೀಶ್ ಹೆಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಸರ್ಕಾರದಿಂದ ನಿಮಗಾಗಿ ಅನೇಕ ಯೋಜನೆಗಳಿವೆ. ನೀವು ಇಲಾಖೆಯವರನ್ನು ಸಂಪರ್ಕಿಸುವುದನ್ನು ರೂಢಿ ಮಾಡಿಕೊಳ್ಳಿ. ಜೇನು ಸಾಕಣೆ ಮಾಡುವವರಿದ್ದರೆ ನಿಮಗೆ ತೊಂಬತ್ತರಷ್ಟು ಸಬ್ಸಿಡಿ ದರದಲ್ಲಿ ಜೇನುಪೆಟ್ಟಿಗೆ ಸಿಗುತ್ತದೆ. ಅಡಿಕೆಯ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧಗಳು ಪುಕ್ಕಟೆಯಾಗಿ ನಮ್ಮ ಇಲಾಖೆಯಲ್ಲಿ ಸಿಗುತ್ತವೆ. ಹೊಸ ತೋಟ ನಿರ್ಮಾಣ, ಇಂಗುಗುAಡಿ ನಿರ್ಮಾಣಕ್ಕೂ ಅವಕಾಶವಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್ ಹೆಗಡೆಯವರು ಮಾತನಾಡುತ್ತ ಹೇಳಿದರು.

ಅವರು ಉಮ್ಮಚ್ಗಿ ವಿದ್ಯಾಗಣಪತಿ ಸಭಾಭವನದಲ್ಲಿ ಜಯ ಆರ್ಗ್ಯಾನಿಕ್ ಯೋಜನೆ ಬೆಂಗಳೂರು ಇವರ ಆಶ್ರಯದಲ್ಲಿ ಕಳೆದ ಇಪ್ಪತ್ತೆಂಟರಿAದ ನಾಲ್ಕನೇ ತಾರೀಖಿನ ವರೆಗೆ ನಡೆಯುತ್ತಿರುವ ಹಿಂದುಳಿದ ವರ್ಗಗಳ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮದ ಅಂಗವಾಗಿ ತೋಟಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು, ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿ ಮಾತನಾಡುತ್ತಿದ್ದರು.

ಪಂಚಾಯತದಿAದಲೂ ನಿಮಗೆ ಸೌಲಭ್ಯಗಳು ಸಿಗುತ್ತವೆ. ನರೇಗಾದಲ್ಲಿ ಬಹಳಷ್ಟು ಕೆಲಸಗಳನ್ನು ನೀವು ಮಾಡಿಕೊಳ್ಳಬಹುದು. ನಿಮ್ಮ ಭಾಗದ ಸದಸ್ಯರನ್ನು ವಿಚಾರಿಸಿದರೆ ಮಾಹಿತಿ ಕೊಡುತ್ತಾರೆ ಎಂದು ಮತ್ತೊಬ್ಬ ಅತಿಥಿ ಉಮ್ಮಚ್ಗಿ ಗ್ರಾಮ ಪಂಚಾಯತ ಸದಸ್ಯರಾದ ಗ.ರಾ.ಭಟ್ಟ ಹೇಳಿದರು.
ವೇದಿಕೆಯಲ್ಲಿ ಸಂಘಟನೆಯ ಜಿಲ್ಲಾ ಸಂಯೋಜಕರಾದ ಇಮಾಮ ಎ.ಕಕ್ಕೇರಿ, ತರಬೇತುದಾರಾದ ಶಿವಾನಂದ ಎಲಿಗಾರ್, ವಿನಯ್, ಪರಮೇಶ್ವರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

ಸ್ವಾಗತಿಸಿ, ನಿರ್ವಹಿಸಿ, ಕಾರ್ಯಕ್ರಮದ ವಂದನಾರ್ಪಣೆಯನ್ನು ತರಬೇತುದಾರರಲ್ಲಿ ಒಬ್ಬರಾದ ಮಂಜು ಎಸ್. ಸಿದ್ದಿ ಹುಲ್ಲಾರಮನೆ ಮಾಡಿದರು.
ಜಯ ಆರ್ಗ್ಯಾನಿಕ್ ಯೋಜನೆ ಎಂಬುದು ಒಂದು ಸ್ವಯಂ ಸೇವಾ ಸಂಘಟನೆ ಆಗಿದ್ದು ಸಿದ್ದಿ ಬುಡಕಟ್ಟು ಸ್ವಸಹಾಯ ಸಂಘಗಳ ಮಹಿಳೆಯರ ಅಭಿವೃದ್ಧಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ. ಅದರ ಅಂಗವಾಗಿ ಬುಡಕಟ್ಟು ಮಹಿಳೆಯರಿಗೆ ಜೇನು ಸಾಕಣೆ ತರಬೇತಿ ಮತ್ತು ಜೇನು ಪೆಟ್ಟಿಗೆ ವಿತರಣೆ, ಎರೆಹುಳು ಗೊಬ್ಬರ ತಯಾರಿಕಾ ತರಬೇತಿ ಮತ್ತು ಎರೆಹುಳು ತೊಟ್ಟಿಗಳ ವಿತರಣೆ, ತರಕಾರಿ ಬೆಳೆಗಳ ಕುರಿತು ತರಬೇತಿ ಮತ್ತು ಬೀಜ ವತರಣೆ,ನರ್ಸರಿ ತರಬೇತಿ ಮುಂತಾದ ಸಾವಯವ ಕೃಷಿಗೆ ಉತ್ತೇಜನ ಕೊಡುವ ಕೆಲಸಗಳನ್ನು ಮಾಡುತ್ತ ಬಂದಿದೆ. ಈ ಸಂಘಟನೆಯ ರುವಾರಿಗಳಾದ ಸ್ಮತಾ ಶಾಹ್ ಅವರು, ಸದ್ಯ ತರಬೇತಿಯಲ್ಲಿ ಪಾಲ್ಗೊಂಡಿರುವ ಅರವತ್ತೇಳು ಬುಡಕಟ್ಟು ಕುಟುಂಬಗಳ ಮಹಿಳೆಯರಿಗೆ ಒಬ್ಬೊಬ್ಬರಿಗೆ ಹತ್ತತ್ತು ತೆಂಗಿನ ಸಸಿಗಳನ್ನು ವಿತರಿಸುವ ಆಲೋಚನೆ ಹೊಂದಿರುವುದಾಗಿ ತಿಳಿಸಿರುತ್ತಾರೆ.

error: