May 19, 2024

Bhavana Tv

Its Your Channel

“ಕುಂದರಗಿ ಹಾಲು ಉತ್ಪಾದಕರ ಸಂಘಕ್ಕೆ ದಶಮಾನೋತ್ಸವದ ಸಂಭ್ರಮ”

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ :ಕುಂದರಗಿ ಹಾಲು ಉತ್ಪಾದಕರ ಸಂಘದ ದಶಮಾನೋತ್ಸವ ಸಮಾರಂಭ ಕುಂದರಗಿಯ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿನೂತನವಾಗಿ ಆಚರಿಸಲಾಯಿತು. ‘ಧಾತ್ರಿ ಫೌಂಡೇಶನ್, ಯಲ್ಲಾಪುರ’ ಇದರ ಸಹಯೋಗದಲ್ಲಿ ೫೦ ಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ಕ್ಯಾನ್ ವಿತರಿಸುವ ಹಾಗೂ ಪಶು ಸಂಗೋಪನಾ ಇಲಾಖೆ ಯಲ್ಲಾಪುರ ವತಿಯಿಂದ ಪಶು ಗೆ ಸಂಭAದಿಸಿದ ಕಿಟ್ ವಿತರಣೆ ಮಾಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಧಾತ್ರಿ ಫೌಂಡೇಶನ್ ನ ಸಂಸ್ಥಾಪಕ ಶ್ರೀನಿವಾಸ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮಗು ಹಾಗೂ ಗೋವಿಗೂ ಅವಿನಾಭಾವ ಸಂಭAದವಿದೆ ನ ‘ಇಂದು ಹೈನುಗಾರಿಕೆಯಲ್ಲಿ ತೊಡಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೆಂಬಲ ಬೆಲೆ ಇಲ್ಲದಿರುವುದು, ಸರಿಯಾದ ನಿರ್ವಹಣೆ ಕೌಶಲ್ಯ ಇಲ್ಲದಿರುವ ಕಾರಣ ಅನೇಕ ಹಾಲು ಉತ್ಪಾದಕ ಸಂಘಗಳನ್ನು ಹೆಚ್ಚು ದಿನಗಳು ಮುನ್ನಡೆಸಲಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಕುಂದರಗಿ ಹಾಲು ಉತ್ಪಾದಕರ ಸಂಘವು ತನ್ನ ಆಡಳಿತ ದಕ್ಷತೆಯಿಂದಾಗಿ ದಶಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ಸಂಗತಿ. ಸಂಘವು ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಇಂಥ ಸಾಧನೆಯಲ್ಲಿ ತೊಡಗಬಹುದಾಗಿದೆ. ಕಾರಣ ಸಂಘವನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಧಾತ್ರಿ ಫೌಂಡೇಶನ್ ವತಿಯಿಂದ ಹಾಲಿನ ಕ್ಯಾನ್ ವಿತರಿಸಲಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹೆಗಡೆಯವರು ಮಾತನಾಡಿ ‘ಸಂಘವು ಇಲ್ಲಿಯವರೆಗೆ ನಡೆದು ಕೊಂಡು ಬಂದ ಹಾದಿಯನ್ನು ನಮ್ಮ ಸಂಘವು ಪಟ್ಟ ಕಷ್ಟಗಳ ಬಗ್ಗೆ ಸವಿಸ್ತಾರವಾಗಿ ವಿಸ್ತರಿಸಿದರು ಹಾಗೂ ಸಂಘ ಕಟ್ಟಡವನ್ನು ನಿರ್ಮಿಸಲು ಕಾರಣಿಕರ್ತರಾದವರನ್ನು ನೆನಪಿಸಿಕೊಂಡರು ಸಂಘವನ್ನು ಯಶಸ್ವಿಯಾಗಿ ಮುನ್ನಡೆಯಲು ಸಂಘದ ಎಲ್ಲ ಸದಸ್ಯರು ಕಾರಣರಾಗಿದ್ದಾರೆ. ಪ್ರತಿಯೊಬ್ಬರು ಮುಂದಿನ ದಿನಗಳಲ್ಲಿ ಸಂಘವನ್ನು ಸಮರ್ಥವಾಗಿ ಬಲಿಷ್ಟವಾಗಿ ಮುನ್ನೆಡಿಕೊಂಡು ಹೊಗಬೇಕಾಗಿದೆ ದಶಮಾನೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲ ಹಾಲು ಉತ್ಪಾದಕರಿಗೆ ಶುಭ ಹಾರೈಸಿದರು.

ಗ್ರಾಮ ಪಂಚಾಯತ ಸದಸ್ಯರಾದ ಗಣೇಶ ಹೆಗಡೆ ಮಾತನಾಡಿ ತಾವು ಗ್ರಾಮ ಪಂಚಾಯತ್ ವತಿಯಿಂದ ನೀಡುತ್ತಿರುವ ಹೈನೋದ್ಯಮದ ಕೊಟ್ಟಿಗೆ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆಯಲ್ಲಿ ನೂರಕ್ಕು ಹೆಚ್ಚು ಜನರನ್ನು ಸೇರಿಸಲಾಗಿದೆ ಎಂದರು. ಪಶು ಸಂಗೋಪನಾ ಇಲಾಖೆ ವತಿಯಿಂದ ಸುಬ್ರಾಯ್ ಭಟ್ ಅವರು ಪಶುಗಳ ಆರೋಗ್ಯದ ವಿಷಯಗಳ ಬಗ್ಗೆ ಸರ್ಕಾರದ ಯೋಜನೆಗಳ ಬಗ್ಗೆ ತಮ್ಮ ಇಲಾಖೆಯ ವಿವಿಧ ಮಾಹಿತಿಗಳ ಬಗ್ಗೆ ಉಪನ್ಯಾಸವನ್ನು ನೀಡಿದರು

ಕಾರ್ಯಕ್ರಮದಲ್ಲಿ ಧಾತ್ರಿ ಫೌಂಡೇಶನ್ ನ ಸಂಸ್ಥಾಪಕರಾದAತಹ ಶ್ರೀನಿವಾಸ್ ಭಟ್ ಅವರಿಗೆ ಹಾಗೂ ಡೇರಿಯ ಕಟ್ಟಡ ನಿರ್ಮಾಣ ಮಾಡಲು ದಾನವಾಗಿ ಜಾಗವನ್ನು ನೀಡಿರುವಂತಹ ಸಮಾಜಸೇವಕ ಎನ್ ಎಸ್ ಹೆಗಡೆ ಕುಂದರಗಿಯವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯತ ಸದಸ್ಯರಾದ ಗಣೇಶ ಹೆಗಡೆ, ರಾಮಕೃಷ್ಣ ಹೆಗಡೆ ಕುಂದರಗಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರಾಘು ಭಟ್ ಮಾಜಿ ತಾಲೂಕು ಪಂಚಾಯತ ಸದಸ್ಯರಾದ ನಟರಾಜ್ ಗೌಡರ್, ಭರಣಿ ಹಾಲು ಉತ್ಪಾದಕ ಸ.ಸಂಘದ ಅಧ್ಯಕ್ಷರಾದ ವಿನಾಯಕ್ ಭಟ್, ಕುಂದರಗಿ ಸಂಘದ ಉಪಾಧ್ಯಕ್ಷರಾದ ಶ್ರೀಧರ ಹೆಗಡೆ ಕೊಟ್ಟಳ್ಳಿ ಹಾಗೂ ಸಂಘದ ನಿರ್ದೇಶಕರು ಸದಸ್ಯರು ಊರ ನಾಗರಿಕರು ಹಾಜರಿದ್ದರು. ರಾಘು ಕುಂದರಗಿ ನಿರ್ವಹಿಸಿದರು, ಕಾರ್ಯದರ್ಶಿಗಳಾದ ಸಂಧ್ಯಾವರು ಸ್ವಾಗತಿಸಿದರು.ರಾಮಕೃಷ್ಣ ಹೆಗಡೆ ವಂದಿಸಿದರು.

error: