May 6, 2024

Bhavana Tv

Its Your Channel

ಉಮ್ಮಚಗಿ ವಿದ್ಯಾಗಣಪತಿ ದೇವಸ್ಥಾನಕ್ಕೆ ಸ್ವರ್ಣವಲ್ಲಿ ಶ್ರೀಗಳ ಭೇಟಿ ಆಶೀರ್ವಚನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಯಾವುದೇ ಕೆಲಸ ಮಾಡುವ ಮೊದಲು ಆಶೆ ಮತ್ತು ದ್ವೇಷವನ್ನು ಬಿಟ್ಟಿರಬೇಕು. ದೇವಸ್ಥಾನಗಳು ಬೆಳೆದಷ್ಟೂ ಊರಿಗೆ ಒಳ್ಳೆಯದಾಗುತ್ತದೆ. ಭರತನಹಳ್ಳಿ ಸೀಮೆಯ ಸುಸಂಸ್ಕೃತ ಊರುಗಳಲ್ಲಿ ಒಂದಾಗಿರುವ ಉಮ್ಮಚ್ಗಿಯಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ ದೇವರಿಗೆ ಪ್ರಿಯವಾದ ಸಂಗತಿಯಾಗಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ, ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, (ರಿ.)ಶಿರಸಿ, ವಿದ್ಯಾಗಣಪತಿ ದೇವಸ್ಥಾನ ಉಮ್ಮಚ್ಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ಪರಮ ಪೂಜ್ಯ ಗಂಗಾಧರೇAದ್ರ ಸರಸ್ವತಿ ಸ್ವಾಮಿಗಳು ಉಮ್ಮಚ್ಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ಮಾತನಾಡುತ್ತ ಹೇಳಿದರು.
ಈ ಸಂದರ್ಭದಲ್ಲಿ ಗೀತಾ ಹೆಗಡೆ ಶೀಗೆಮನೆ ಮತೃಮಂಡಳಿ ಸದಸ್ಯರು ಸ್ವರ್ಣವಲ್ಲಿ,ಶರಾವತಿ ಗಜಾನನ ಭಟ್ಟ ಭಗವದ್ಗೀತಾ ಅಭಿಯಾನ ಮಂಡಳಿ ಉಮ್ಮಚ್ಗಿ, ಕುಪ್ಪಯ್ಯ ಪೂಜಾರಿ ಅಧ್ಯಕ್ಷರು ವಿದ್ಯಾಗಣಪತಿ ದೇವಸ್ಥಾನ ಉಮ್ಮಚ್ಗಿ, ಎನ್.ಜಿ.ಹೆಗಡೆ ಭಟ್ರಕೇರಿ ಆಡಳಿತ ಕಮಿಟಿ ಸದಸ್ಯರುಸ್ವರ್ಣವಲ್ಲಿ, ಮಾಧವ ನರಸಿಂಹ ಭಟ್ಟ ಆಚಾರ ಭಟ್ಟ ಹಿತ್ಲಳ್ಳಿ, ಜಿ.ಜಿ.ಹೆಗಡೆ ಕನೇನಳ್ಳಿ,ವರದಾ ಹೆಗಡೆ,ರಾಧಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

error: