May 4, 2024

Bhavana Tv

Its Your Channel

ವೃತ್ತಿ ಕಲಾವಿದರಿಂದಾಗಿ ಕಲೆ, ಸಂಸ್ಕೃತಿ ಉಳಿದುಕೊಂಡಿದೆ-ಸಚಿವ ಶಿವರಾಮ ಹೆಬ್ಬಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ವೃತ್ತಿ ರಂಗಭೂಮಿ ಕಲಾವಿದರಿಂದಾಗಿ ಕಲೆ, ಸಂಸ್ಕೃತಿ ಉಳಿದಿದೆ ಎಂದು ಕಾರ್ಮಿಕ ಇಲಾಖೆಯ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಯಲ್ಲಾಪುರ ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಮದ್ಗುಣಿ ಫ್ಲಾಟ್ ನಲ್ಲಿ ಶ್ರೀ ಗುರು ಸಿದ್ಧಲಿಂಗೇಶ್ವರ ನಾಟ್ಯ ಸಂಘ ಮಂಡಲಗಿರಿ ಇವರು ಆಯೋಜಿಸಿರುವ ‘ಎಲ್ಲಿ ಅದಿ ಮಲ್ಯಾ’ ನಾಟಕದ ಪ್ರಥಮ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ ಕಂಪನಿಗಳ ಕಲಾವಿದರ ಬದುಕು ಕಷ್ಟಕರವಾಗಿದೆ. ಇಂತಹ ದುಸ್ತರ ಪರಿಸ್ಥಿತಿಯಲ್ಲೂ ನಮಗೆ ಕಲೆಯನ್ನು ಉಣಬಡಿಸುವ ಕಾರ್ಯ ಮಾಡುತ್ತಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ನೆರವಾಗುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದರು.
ಸ್ಥಳದ ಮಾಲಕರಾದ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ವಿಜಯ್ ಮಿರಾಶಿ, ಪ್ರಕಾಶ ಹೆಗಡೆ, ಬೀರಣ್ಣ ನಾಯಕ ಮೊಗಟಾ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಕಮಲಾಕರ ನಾಯ್ಕ, ನಾಗರಾಜ ನಾಯ್ಕ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸಂಗನ ಬಸಯ್ಯ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ವಿನಾಯಕ ಪೇಟ್ಕರ್, ನಾಟ್ಯ ಸಂಘದ ಮಾಲಕ ಕುಮಾರ ಅರಳಿ ಹಳ್ಳಿ ವೇದಿಕೆಯಲ್ಲಿದ್ದರು.
ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಾಗರಾಜ ಮದ್ಗುಣಿ ಸ್ವಾಗತಿಸಿದರು, ಎಸ್.ಎಲ್.ಜಾಲಿಸತ್ಗಿ ವಂದಿಸಿದರು. ಸುಧಾಕರ ನಾಯಕ ನಿರೂಪಿಸಿದರು.

error: