May 4, 2024

Bhavana Tv

Its Your Channel

ಫೆ.22 ರಿಂದ ಮಾ.2 ರವರೆಗೆ ನಡೆಯಲಿದೆ ಗ್ರಾಮದೇವಿ ಜಾತ್ರೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಮೂರುವರ್ಷಕ್ಕೋಮ್ಮೆ ನಡೆಯುವ ಪ್ರಸಿದ್ದ ಗ್ರಾಮದೇವಿ ಜಾತ್ರೆ ಫೆ.22 ರಿಂದ ಮಾ.2 ರವರೆಗೆ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಎಲ್ಲರೀತಿಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವ ಶಿವರಾಮ ಹೆಬ್ಬಾರವರು ಹೇಳಿದರು.
ಅವರು ಪತ್ರಕರ್ತರಿಗೆ ಮಾಹಿತಿ ನೀಡಿ, ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದAತೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗಾಗಿ ಕೆ.ಎಸ್.ಆರ್.ಟಿ.ಸಿಯಿಂದ 16 ಜಾತ್ರಾವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪಟ್ಟಣವನ್ನು ವಿಶೇಷವಾಗಿ ಸಿಂಗರಿಸಲಾಗಿದೆ ಎಂದರು.
ವಿದ್ಯುದ್ದೀಪಗಳಿಂದ ಪಟ್ಟಣವನ್ನು ಅಲಂಕರಿಸಲಾಗಿದ್ದು, ಹೊಸದಾಗಿ ಅಳವಡಿಸಲಾದ ವಿದ್ಯುದ್ದೀಪ ವ್ಯವಸ್ಥೆಯನ್ನು ಫೆ.21 ರಂದು ಉದ್ಘಾಟಿಸಲಾಗುವುದು. ರಕ್ಷಣೆಗಾಗಿ ಪೊಲೀಸರು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡಿದ್ದು, ಸುರಕ್ಷತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಲಾಗಿದೆ. ಸ್ವಚ್ಛತೆ, ನೀರು ಇತ್ಯಾದಿ ವ್ಯವಸ್ಥೆಗಳಿಗೆ ಪಟ್ಟಣ ಪಂಚಾಯತ ಕ್ರಮ ಕೈಗೊಂಡಿದೆ. ಅಗ್ನಿಶಾಮಕ ದಳದವರೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದರು.
5 ವರ್ಷಗಳ ನಂತರ ಜಾತ್ರೆ ನಡೆಯುತ್ತಿದ್ದು, ಎಂದಿಗಿAತ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದೆ. ಜಾತ್ರೆಯ ಯಶಸ್ಸಿನಲ್ಲಿ ಎಲ್ಲರೂ ಸಹಕರಿಸುವಂತೆ ಅವರು ಕೋರಿದರು.
ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ , ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ, ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ,ತಹಶಿಲ್ದಾರ ಸಿ.ಜಿ.ನಾಯ್ಕ,ಮುಂತಾದವರು ಇದ್ದರು.

error: