May 5, 2024

Bhavana Tv

Its Your Channel

ಉಮಚಗಿ ಸೊಸೈಟಿಯ ಶತಮಾನೋತ್ಸವ ಸಂಭ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಸ್ವಾತಂತ್ರ‍್ಯ ಪೂರ್ವದಲ್ಲಿ ಗುಲಾಮಿತನದ ನಡುವೆಯೂ ಅದನ್ನು ಮೀರಿ ಸಹಕಾರಿ ಸಂಘ ಕಟ್ಟಿರುವುದರಿಂದ ಶತಮಾನದ ಸಂಬ್ರಮ ಕಾಣಲು ಸಾಧ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಉಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ನೆನಪಿಗೆ ನಿರ್ಮಿಸಿದ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಮಾತನಾಡುತ್ತಿದ್ದರು.ಶತಮಾನದ ಗರಿಯಲ್ಲಿ ಸಂಸ್ಥೆ ಯೌವನದಲ್ಲಿ ಮುನ್ನುಗ್ಗುತ್ತಿದೆ.ಜಿಲ್ಲೆಯಲ್ಲಿ ತ್ಯಾಗದ ಮನೋಭಾವದಿಂದ ಸಹಕಾರಿ ಸಂಘ ಕಟ್ಟಿರುವುದರಿಂದ ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ.ಸೊಸೈಟಿ ಕುಟುಂಬದ ಭಾಗವಾಗಿ ಬೆಳೆದಿದೆ.ಯುವ ಪೀಳಿಗೆಯನ್ನು ಹಳ್ಳಿಯಲ್ಲಿಯೇ ಹಿಡಿದಿಡುವಂತೆ,ಅವರ ಆರ್ಥಿಕ ಚಟುವಟಿಕೆಗೆ ನೆರವಾಗುವಂತಹ ಕೆಲಸ ಆಗಬೇಕು. ಹೊಸತನದ ಕೃಷಿ ಚಟುವಟಿಕೆ ಪ್ರೋತ್ಸಾಹಿಸುವ ಕೆಲಸ ಆಗಬೇಕು.
ಸಂಸ್ಥೆಯ ಪಾವಿತ್ರ‍್ಯತೆ ಕಾಯ್ದುಕೊಳ್ಳಲು ಸಮರ್ಪಣಾ ಮನೋಭಾವದಿಂದ ನಡೆಯಬೇಕು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು.
ತಟ್ಟಿಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ, ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ.ಎಸ್.ಅಧ್ಯಕ್ಷರಾದ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ, ಟಿ.ಎಸ್.ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ,ಕುಮಟಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ ಅಳ್ಳಂಕಿ, ಸಿದ್ದಾಪುರ ಟಿ.ಎಂ.ಎಸ್ ಅಧ್ಯಕ್ಷರಾದ ಆರ್.ಎಂ.ಹೆಗಡೆ ಬಾಳೆಸರ , ಟಿ.ಎಂಎಸ್.ಶಿರಸಿಯ ಜಿ.ಎಂ.ಹೆಗಡೆ ಹುಳಗೋಳ,ಹಾಸಣಗಿ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೊರ್ಸಗದ್ದೆ, ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಡಾ.ಎಂ.ಎಸ್.ಹೆಗಡೆ ಮಾರಿಗೋಳಿ,ಪಾರಂಪರಿಕ ವೈದ್ಯ ರಾಮಚಂದ್ರ ಭಟ್ ಅವರನ್ನು ಹಾಗೂ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಎಂ.ಜಿ.ಭಟ್ ಸಂಕದಗುAಡಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಉಪಾಧ್ಯಕ್ಷ ಎಂ.ಪಿ.ಹೆಗಡೆ ಚವತ್ತಿ,ಮುಖ್ಯಕಾರ್ಯನಿರ್ವಾಹಕ ಆರ್.ಎಸ್.ಹೆಗಡೆ ಕನೇನಹಳ್ಳಿ,ನಿರ್ಧೇಶಕರಾದ ನಾಗಪತಿ ಹೆಗಡೆ,ಪರಮೇಶ್ವರ ಹೆಗಡೆ,ಉದಯ ಭಟ್ಟ,ದತ್ತಾತ್ರಯ ಭಟ್,ಅರುಂಧತಿ ಭಟ್,ನಾಗರತ್ನ ಹೆಗಡೆ,ವಾಸು ಬೋವಿ,ಸೀತಾರಾಮ ನಾಯ್ಕ,ಪಟ್ಟು ಗೌಡ,ಅಶೋಕ ಹೆಗಡೆ,ನಾರಾಯಣ ಸಿದ್ದಿ ಇದ್ದರು. ವಿಘ್ನೇಶ್ವರ ಭಟ್,ಸವಿತಾ ಹೆಗಡೆ ನಿರೂಪಿಸಿದರು.

error: