May 5, 2024

Bhavana Tv

Its Your Channel

ಅಲ್ಕೇರಿ ಗೌಳಿವಾಡದಲ್ಲಿ ಕಂಡುಬoದ ಹೋಳಿಯ ಕೊನೆ ದಿನದ “ರದ್ಮಾಲ್”.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಹೋಳಿ ಹಬ್ಬದ ಪ್ರಯುಕ್ತ ಗೌಳಿಗರು ಮಾಡುವ ವಿಶಿಷ್ಟವಾದ” ರದ್ಮಾಲ್ ಜಾನಪದ ನೃತ್ಯ ಶೈಲಿ” ಯು ಮನಮೋಹಕವಾಗಿದೆ. ಹೋಳಿ ಕಾಮಣ್ಣನ ಸುಟ್ಟ ನಂತರ ಐದು ದಿನ ಬೇರೆ ಬೇರೆ ಊರುಗಳಲ್ಲಿ ಈ ರದ್ಮಾಲ್ ನೃತ್ಯವನ್ನು ಹಾಡಿ ಕುಣಿದು ಕಾಣಿಕೆಯನ್ನು ಸಂಗ್ರಹಿಸುತ್ತಾರೆ ಕೊನೆಗೆ ಸಂಗ್ರಹವಾದ ಕಾಣಿಕೆಯಲ್ಲಿ ಐದನೇ ದಿನಕ್ಕೆ ತಮ್ಮತಮ್ಮ ಊರಲ್ಲಿ ಬಂದು ಮನೆ ಮನೆಗೆ ತಿರುಗಿ ಕುಣಿದು ಕೊನೆ ದಿನ ಹೋಳಿ ಸುಟ್ಟ ಸ್ಥಳದಲ್ಲಿ ಹಾಡುತ್ತ ಕುಣಿಯುತ್ತಾರೆ. ಕುಣಿತ ಮುಗಿದ ನಂತರ ಹೋಳಿಯನ್ನು ನಮಸ್ಕರಿಸಿ ವಿಶಿಷ್ಟವಾದ ಅವರ ಸಮವಸ್ತ್ರವನ್ನು ದೇವರ ಮುಂದೆ ಕಂಬಳಿ ಹಾಸಿ ಅದರ ಮೇಲೆ ಇಟ್ಟು ಒಬ್ಬೊಬ್ಬರು ಚಕ್ರಾಸನ ದಲ್ಲಿ ಅದನ್ನು ತೆಗೆಯುತ್ತಾರೆ. ನಂತರ ಹೋಳಿಯಲ್ಲಿಟ್ಟ ಕಲ್ಲನ್ನು ಮತ್ತೆ ನಮಸ್ಕರಿಸಿ ಒಂದು ಕಲ್ಲನ್ನು ಹೊರಗೆ ತೆಗೆದು ಎತ್ತಿ ಶಕ್ತಿ ಪ್ರದರ್ಶನ ಮಾಡುತ್ತಾರೆ.ನಂತರ ಅಂದು ಸಂಜೆ ಹೋಳಿ ದೇವರ ಮುಂದೆ ಕುರಿಯನ್ನು ಬಲಿಕೊಟ್ಟು ಸಾಮೂಹಿಕವಾಗಿ ಇಡೀ ಊರ ಜನರನ್ನು, ಹೊರಗಿನವರನ್ನು ಕರೆದು ಊಟ ಹಾಕಿ ಹೋಳಿಯನ್ನು ಮುಗಿಸುವುದು ಗೌಳಿ ಸಮೂದಾಯದ ವಿಶಿಷ್ಟವಾದ ಸಂಪ್ರದಾಯ ಬಗ್ಗೆ ಅಲ್ಕೇರಿ ,ಗೌಳಿವಾಡದ ಶಿಕ್ಷಕರಾದ ಗಂಗಾಧರ ಎಸ್ ಎಲ್.ರವರು ಚಿತ್ರ ಸಮೇತ ವಿವರಿಸಿದ್ದಾರೆ.

error: