May 5, 2024

Bhavana Tv

Its Your Channel

ನಾರಿಶಕ್ತಿ ನಾರಾಯಣಿಶಕ್ತಿಯು ಪುರಾಣ ಕಾಲದಲ್ಲಿಯೂ ಪುರುಷರಿಗೆ ಸಮಾನ-ಚಂದ್ರಕಲಾ ಭಟ್ಟ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ನಾರಿಶಕ್ತಿ ನಾರಾಯಣಿ ಶಕ್ತಿ ಎಂಬುದನ್ನು ಪುರಾಣ ಕಾಲದಲ್ಲಿಯೂ ಕೂಡ ಮಹಿಳೆಯರಿಗೆ ಪುರುಷ ಸಮಾನವಾದ ಗೌರವ ಸ್ಥಾನ, ಮಾನಗಳನ್ನ ನೀಡಿರುವುದನ್ನ ಕೇಳಿದ್ದೇವೆ. ಅದರಂತೆ ಮಹಿಳೆಯರಿಗೆ ಇಂದು ಕೂಡ ಪುರುಷ ಸಮಾನವಾದ ಗೌರವ,ಸ್ಥಾನ, ಮಾನ ಸಿಗುವಂತಾಗಬೇಕು ಅಂದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ವಾಗಲು ಸಾಧ್ಯ ಎಂದು ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಕಲಾ ಭಟ್ ಹೇಳಿದ್ದಾರೆ.

ಅವರು ಮಾರ್ಚ್ 12 ರಂದು ಎನ್. ಟಿ. ಕೋ ಆವಾರದಲ್ಲಿ ಯಲ್ಲಾಪುರದ ಮಹಿಳಾ ಪತಂಜಲಿ ಯೋಗ ಸಮೀತಿಯವರು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿಂದೆ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ಪತ್ನಿಯರಿಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಿ ತಾವಿಬ್ಬರು ಸಮಾನರು ಎಂಬ ತತ್ವ ಸಂದೇಶವನ್ನು ಈಡಿ ಜಗತ್ತಿಗೆ ಸರಿದ್ದಾರೆ. ಈ ಸಂದೇಶವನ್ನ ಇಂದು ನಾವೆಲ್ಲರೂ ಕೂಡ ಅಳವಡಿಸಿ ಕೊಳ್ಳಬೇಕಾದ ಸಂಧರ್ಭ ತುಂಬಾ ಇದೆ. ಆದರೆ ಈ ಕಾಲಘಟ್ಟದಲ್ಲಿ ನಾವೆಲ್ಲ ಮಹಿಳೆಯರು ಅಸಮಾನತೆ, ಅಬಲೆ, ಶೋಷಣೆ ಇಂತಹ ಪದಗಳನ್ನ ಉಪಯೋಗಿಸುವುದಕ್ಕೆ ಕಾರಣ ಏನು ಎಂಬ ಜಿಜ್ಞಾಸೆ ನಮ್ಮ ಮನಸ್ಸಿನಲ್ಲಿ ಮೂಡುತ್ತಿದೆ. ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿದ್ದವು ಎಂಬುದನ್ನು ನಾವು ತಿಳಿದಿದ್ದೇವೆ. ಈ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಎಲ್ಲರಲ್ಲೂ ಉಳಿಯುವ ವಾಕ್ಯ ಎಂದರೆ ಯತ್ರ ನಾರ್ಯಸ್ತು ಪೂಜ್ಯನಂತೆ ರಮಾಂತೆ ತತ್ರದೇವತಾ ಎಲ್ಲಿ ಮಹಿಳೆಯರಿಗೆ ಸರಿಯಾದ ಗೌರವ ಸಿಗುವುದಿಲ್ಲವೋ ಅಲ್ಲಿ ಯಾವ ಕಾರ್ಯಗಳು ಫಲಿಸುವುದಿಲ್ಲ ಎಂಬ ಮಾತಿದೆ. ಹಾಗೆ ನೋಡಿದರೆ ವೇದ ಕಾಲದಲ್ಲಿ ಮಹಿಳೆಯರಿಗೆ ಮಾನ, ಸನ್ಮಾನ ಇದ್ದವು ಆದರೆ ಈಗ ಯಾಕಿಲ್ಲ ಎಂದು ಕೇಳಿದರೆ ಯಾವಾಗೆಲ್ಲ ನಮ್ಮ ಮೇಲೆ ವಿದೇಶಿಯರ ಆಕ್ರಮಣ ಆಯಿತೋ ಅದೆಲ್ಲಾ ನಮ್ಮ ಸಂಸ್ಕೃತಿಯ ಮೇಲು ಆಕ್ರಮಣ ಆಗಿದೆ. ಏಕೆಂದರೆ ಭಾರತದ ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದ ಧರ್ಮ. ಪ್ರಪಂಚದ ಬೇರೆಡೆಯಲ್ಲಿಯೂ ಸಿಗದಂತ ಧರ್ಮ. ಎಲ್ಲಿ ಅಧರ್ಮವಿದೆಯೋ ಅಲ್ಲಿ ಅದನ್ನು ಪರಮಾತ್ಮನು ಸ್ತ್ರೀ ಮೂಲಕವಾಗಿ ನಾಶಮಾಡಿರುವುದನ್ನ ನಾವು ಕೇಳಿದ್ದೇವೆ. ಈ ಕಾಲದಲ್ಲಿ ಮಹಿಳೆಯರು ಒಳ್ಳೆಯವರಿಗೆ ಒಳ್ಳೆಯವರಾಗಿರಬೇಕು ಕೆಟ್ಟವರಿಗೆ ಕೆಟ್ಟವರಾಗಿಯೇ ಇರಬೇಕು. ಈ ಕಾಲದಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಸಿಡಿದೆಳಬೇಕು ಅಗ್ನಿಸಂಭೂತೆಯಾಗಬೇಕು ದ್ರೌಪದಿಯಂತ ರೋಷ ಉಕ್ಕಬೇಕು ಒಳ್ಳೆಯ ಗುಣಕ್ಕೆ ಸೀತೆಯಂತ ತಾಳ್ಮೆ ಹೊಂದಿರಬೇಕು ಅಂದಾಗ ಮಾತ್ರ ಹೆಣ್ಣು ಸಮನತೆಯಿಂದ ಮತ್ತು ಗೌರವದಿಂದ ಬದುಕಲು ಸಾಧ್ಯ ಎಂದು ಚಂದಕಲಾ ಭಟ್ ರವರು ಹೇಳಿದರು.
ಈ ಸಂಧರ್ಭದಲ್ಲಿ ಮಹಿಳಾ ಸಾಧಕಿಯರಾದ ಯೋಗ ಮತ್ತು ವ್ಯಸನ ರಹಿತ ಸಮಾಜಕ್ಕೆ ಶ್ರಮಿಸುತ್ತಿರುವ ಅನುಸೂಯ ವೆಂ. ಮುದ್ದೆಪಾಲ್ ರವರನ್ನು ಹಾಗೂ ಶ್ರಮ ಸಾಧಕಿಯಾದ ಆಟೋ ಚಾಲನೆ ನಡೆಸುತ್ತಿರುವ ಅನ್ನಪೂರ್ಣ ಭಟ್ ರವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತಂಜಲಿ ಮಹಿಳಾ ಪ್ರಭಾರಿ ಚೈತ್ರಾ ನಾಯ್ಕ್ ರವರು ಮಾತನಾಡಿ ಸ್ವಾಸ್ತ್ಯ ಸಮಾಜವನ್ನು ಕಾಪಾಡಲು ಪ್ರತಿಯೊಬ್ಬರು ಯೋಗ ಮತ್ತು ಪರಣಾಯಾಮಗಳನ್ನು ರೂಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕ ಪ್ರಭಾರಿ ಶೈಲಾಶ್ರೀ ಭಟ್ ರವರು ಸ್ವಾಗತಿಸಿದರು. ಸೋಷಿಯಲ್ ಮೀಡಿಯಾ ಪ್ರಭಾರಿಯಾದ ಆಶಾ ಭಗನಗದ್ದೆ ಪ್ರಾರ್ಥಿಸಿ ಪ್ರಾಸ್ತವಿಕ ಮಾತನ್ನಾ ಡಿದರು. ಜಾನ್ಹವಿ ಭಟ್ ಮತ್ತು ರಚನಾ ಹೆಗೆಡೆ ಸನ್ಮಾನ ಪತ್ರ ಓದಿದರು.ಕಾರ್ಯಧರ್ಶಿ ಸಂಧ್ಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ರಂಜನಾ ಭಟ್ಟ ವಂದಿಸಿದರು. ನಂತರ ಮಹಿಳೆಯರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನಡೆದವು.

error: