May 4, 2024

Bhavana Tv

Its Your Channel

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ರಕ್ತದಾನ ಶಿಬಿರ

ವಸಂತಪುರ : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹಾಗೂ ೩ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ವಸಂತಪುರ ನಗರದ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಸಂಸ್ಥಾಪಕಾಧ್ಯಕ್ಷ ರಾದ ಸುಜಾತರವರು “ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ಭಾರತದ ಕಾರ್ಗಿಲ್ ಎಂಬ ಜಿಲ್ಲೆಯ ಪ್ರದೇಶಗಳನ್ನು ಭಾರತವು ಪುನರ್ ವಶಪಡಿಸಿಕೊಂಡ ದಿನವನ್ನು ರಾಷ್ಟ್ರ ಮಟ್ಟದಲ್ಲೆ ಅತ್ಯಂತ ವಿಜೃಂಭಣೆಯಿAದ ಕಾರ್ಗಿಲ್ ವಿಜಯ ದಿವಸವೆಂದು ಆಚರಿಸಲಾಗುವುದು, ಇಂದು ಅತ್ಯಂತ ಮಹತ್ವ ದಿನವಾಗಿದ್ದು, ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಭಾರತ ಅತ್ಯಂತ ಶಾಂತಿಯ ದೇಶ. ಹಾಗೆಯೇ ಭಾರತೀಯ ಸೇನೆ ಕೂಡ ಶಾಂತಿ ಹಾಗೂ ಶಿಸ್ತಿನಿಂದ ಕೂಡಿದೆ ಎಂದರು. ವೀರ ಯೋಧರ ತ್ಯಾಗ ಬಲಿದಾನದ ಜ್ಞಾಪಕಾರ್ಥವಾಗಿ ರಕ್ತದಾನದ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ವಿಶೇಷ. ಪ್ರತಿದಿನ ಸಾವಿರಾರು ಜನರು ರಕ್ತದ ಕೊರತೆಯಿಂದ ಸಾಯುತ್ತಿದ್ದಾರೆ. ರಕ್ತದ ಕೊರತೆಗೆ ಬದಲಿ ವ್ಯವಸ್ಥೆಯಿಲ್ಲ. ರಕ್ತ ಪಡೆದು ಬದುಕುಳಿಯುವವರೆಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ. ಹಾಗೆಯೇ ರಕ್ತನಿಧಿ ಕೇಂದ್ರಗಳು ಕೂಡ ದಾನಿಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ಅತ್ಯಂತ ಸುಲಭವಾಗಿ ಮಾಡುವ ಕಾರ್ಯವಾದರು ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದರು.

ರಕ್ತದಾನ ಶಿಬಿರದಲ್ಲಿ ರಾಷ್ಟ್ರೋತ್ತಾನ ರಕ್ತ ನಿಧಿ ಕೇಂದ್ರದ ಸಿದ್ದಲಿಂಗಪ್ಪ ಮತ್ತು ತಂಡದವರಿAದ ದಾನಿಗಳಿಂದ ರಕ್ತ ಸಂಗ್ರಹಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ರಕ್ತದಾನಿಗಳು ಮತ್ತು ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಸದಸ್ಯರುಗಳಾದ ಸಂಜನಾ ಜೋಶಿ, ದೀಕ್ಷಿತಾ, ಚರಣ್, ರೂಪಿಣಿ, ವೆಂಕಟೇಶ್, ಸಂಜಯ್, ರಾಹುಲ್,ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ : ಮಲ್ಲಿಕಾರ್ಜುನ ಬುರ್ಲಿ

error: