May 5, 2024

Bhavana Tv

Its Your Channel

ಮನಗೂಳಿಗೆ ಪಟ್ಟಣಕ್ಕೆ ಆಗಮಿಸಿದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್

ವರದಿ : ಮಲ್ಲಿಕಾರ್ಜುನ್ ಬುರ್ಲಿ

ವಿಜಯಪೂರ: ಆತ್ಮಸ್ಥೈರ್ಯವೇ ಸಾಧನೆಗೆ ಸ್ಪೂರ್ತಿ ಎಂದು ಮನಗೂಳಿಯ ಪಟ್ಟಣದಲ್ಲಿ ಐಪಿಎಸ್ ಅಧಿಕಾರಿಗಳಾದ ರವಿ ಚನ್ನಣ್ಣನವರ ಹೇಳಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿರುವ ಸ್ವಾಮಿ ವಿವೇಕಾನಂದ ವಸತಿ ಶಾಲೆ ಆಯೋಜಿಸಿದ ‘ಯುವ ಮನಸ್ಸುಗಳಿಗಾಗಿ ವಿವೇಕಾನಂದರ ಪೂರ್ತಿ ಕೀರ್ತಿಗಳ ಗಂಗೋತ್ರಿ’ ಭಾಗವಹಿಸಿದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಮಾತನಾಡಿ ಯುವಕರು ಸಾಧನೆ ಮಾಡಬೇಕಾದರೆ ತಮ್ಮ ಆತ್ಮಸ್ಥೈರ್ಯವನ್ನು ಗಟ್ಟಿ ಮಾಡಿಕೊಳ್ಳಬೇಕು ನಮಗೆ ನಾವೇ ಸ್ಫೂರ್ತಿ ಎಷ್ಟೇ ಅಡೆ ತಡೆಗಳು ಬಂದರೂ ನಾವು ಕುಗ್ಗಬಾರದು ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಮಗೆ ನಮ್ಮ ಗುರುಗಳು ಕಲಿಸಿದ್ದಾರೆ ಎಂದು ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.


ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಫಲ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಯಾರನ್ನು ಕೀಳಾಗಿ ನೋಡಬಾರದು, ನಾವು ಚೆನ್ನಾಗಿ ಓದಿ ಸರಕಾರಿ ನೌಕರಿಗೆ ಹೋದಮೇಲೆ ಕೆಲವರಿಗೆ ಬುದ್ಧಿವಾದ ಹೇಳಿ ಅವರಿಗೂ ಒಂದು ಉದ್ಯೋಗ ಕೊಡಿಸುವುದರ ಬಗ್ಗೆ ಕಾಳಜಿವಹಿಸಬೇಕು. ನನಗೆ ಸರಕಾರಿ ನೌಕರಿ ಇದೆ ನಾನೊಬ್ಬ ಚೆನ್ನಾಗಿದ್ದರೆ ಸಾಕು ಎನ್ನುವ ಆಲೋಚನೆ ಯಾವತ್ತೂ ಯಾರಿಗೂ ಬರಬಾರದು ಎಂದು ಐಪಿಎಸ್ ಅಧಿಕಾರಿ ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ನಡೆ-ನುಡಿ ಹಾವಭಾವದಲ್ಲಿ ತಮ್ಮದೇ ಆದ ಸಂಕಲ್ಪದ ದೃಢ ಮನಸ್ಸಿನಿಂದ ವಿದ್ಯಾರ್ಥಿ ಜೀವನದಲ್ಲಿ ಅಭ್ಯಾಸವನ್ನು ಮಾಡುವುದರಿಂದ ಎಂತಹ ಕಠಿಣವಾದ ಪರೀಕ್ಷೆಯನ್ನು ಸುಲಲಿತವಾಗಿ ಬರೆದು ಸರಕಾರಿ ಖಾಸಗಿ ಕ್ಷೇತ್ರದಲ್ಲಿರುವ ಉನ್ನತವಾದ ಹುದ್ದೆಗಳನ್ನು ಅಲಂಕರಿಸಬಹುದು ಎಂದರು.
ಅವರು ಈ ಅಧಿಕಾರಕ್ಕೆ ಬರಬೇಕಾದರೆ ಅವರ ಶ್ರಮ ಶ್ರದ್ಧೆಯನ್ನೇ ಕಾರಣ ಅವರ ಪಟ್ಟಿರುವ ಕಷ್ಟ ನೋವುಗಳನ್ನು ಹಂಚಿಕೊoಡರು ಒಂದು ಬಡ ಕುಟುಂಬದಲ್ಲಿ ಜನಿಸಿದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಈಗ ರಾಜ್ಯದ ಮೂಲೆ ಮೂಲೆಯಲ್ಲಿ ಯುವಪೀಳಿಗೆಗೆ ‘ದೊಡ್ಡ ಅಣ್ಣ’ ಅನಿಸಿಕೊಂಡಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಅನಿಸುತ್ತೆ…
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸ್ವಾಮೀಜಿಯವರು, ಪರಮ ಪೂಜ್ಯ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ, ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಮಾರಿ ಸಂಯುಕ್ತ ಎಸ್ ಪಾಟೀಲ್, ಶ್ರೀ ಸಂಗಮೇಶ ಬಬಲೇಶ್ವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: