May 5, 2024

Bhavana Tv

Its Your Channel

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ಸಪ್ತಾಹ ಕಾರ್ಯಕ್ರಮ

ವರದಿ : ಮಲ್ಲಿಕಾರ್ಜುನ ಬುರ್ಲಿ

ವಿಜಯಪೂರ: “ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ಸಪ್ತಾಹ ಕಾರ್ಯಕ್ರಮ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು”

ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ವಿಜಯಪುರ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ, ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ(ರಿ)ವಿಜಯಪುರ ಮತ್ತು ಇಂಡಿಯನ್ ಸ್ಪೈನಲ್ ಕಾರ್ಡ್ ಅಸೋಸಿಯೇಷನ್ ಅವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಅಪಘಾತದ ವ್ಯಕ್ತಿಗಳ ಪುನರ್ಚೇತನ ಕಾರ್ಯಕ್ರಮದ ಅಡಿಯಲ್ಲಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಕೆ.ಇ.ಬಿ ಸಭಾಭವನದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಜನಜಾಗೃತಿ ಕಾರ್ಯಕ್ರಮ -೨೦೨೧ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎಲ್ಲ ತಾಲೂಕಿನ ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಶೋಭಾ ಆಹೇರಿಕರ ಮಾತನಾಡಿ ಎ.ಪಿ.ಡಿ ಸಂಸ್ಥೆಯವರು ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ, ನಮ್ಮ ವಿದ್ಯುತ್ ಸರಬರಾಜು ನಿಯಮಿತ ಲೈನ್ ಮ್ಯಾನ್ ಗಳು ಹಾಗೂ ಇನ್ನಿತರ ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ದಿ. ಅಸೋಸಿಯೇಷನ್ ಆಫ್ ಪೀಪಲ್ ವಿತೆ ಡಿಸೆಬಿಲಿಟಿ ಸಂಸ್ಥೆಯು ೧೯೫೯ ರಲ್ಲಿ ವಿಕಲಚೇತನ ವ್ಯಕ್ತಿಗಳ ಮತ್ತು ಅವರ ಸ್ನೇಹಿತರು ಜೊತೆಗೂಡಿ ಬೆಂಗಳೂರಿನ ಲಿಂಗರಾಜಪುರದಲ್ಲಿ ಪ್ರಾರಂಭಿಸಿದರು. ಇದರ ಪ್ರಮುಖ ಉದ್ದೇಶ ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಸ್ವಾವಲಂಬನೆ, ಪ್ರಸ್ತುತ ವಾರ್ಷಿಕ ೪೦.೦೦೦ ಕ್ಕೂ ವಿಕಲಚೇತನ ವ್ಯಕ್ತಿಗಳನ್ನು ನೇರವಾಗಿ ತಲುಪುತ್ತಿದ್ದು ಹಾಗೂ ಪ್ರಸ್ತುತ ಸಂಸ್ಥೆಯು, ಕಲಬುರ್ಗಿ ವಿಭಾಗ, ಬೆಳಗಾವಿ ವಿಭಾಗ, ವಿಜಾಪುರ ಜಿಲ್ಲೆಯಲ್ಲಿ ವಿಕಲಚೇತನ ವ್ಯಕ್ತಿಗಳ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಎ.ಪಿ.ಡಿ ಸಿಬ್ಬಂದಿಗಳು ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ಇವನಗಿ ಗ್ರಾಮದ ಮಂಜುನಾಥ್ ಕಲಬುರ್ಕಿ ಎಂಬ ವ್ಯಕ್ತಿ ನಾಲ್ಕು ವರ್ಷದ ಹಿಂದೆ ವಿದ್ಯುತ್ ಕಂಬದ ಮೇಲಿಂದ ಬಿದ್ದು ಬೆನ್ನುಹುರಿ ಅಪಘಾತ ವಾಗಿರುತ್ತದೆ. ಈಗ ಆ ವ್ಯಕ್ತಿಗೆ ಎಪಿಡಿ ಸಂಸ್ಥೆ ವತಿಯಿಂದ ಪುನರ್ಚೇತನ ಮತ್ತು ಸಾಧನ ಸಲಕರಣೆಗಳು ಮತ್ತು ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

error: