May 4, 2024

Bhavana Tv

Its Your Channel

ನಾಲ್ಕು ದಿನಗಳ ಕಾಲ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮ

ವಿಜಯಪೂರ: “ನಾಲ್ಕು ದಿನಗಳ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮಗಳು ಮನಗೂಳಿ ಪಟ್ಟಣದಲ್ಲಿ ಮಾಡಲಾಯಿತು”

ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾ ಆಡಳಿತ ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶ ವಿಜಾಪುರ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯ ಮನಗೂಳಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಗಳು ನಾಲ್ಕುದಿನಗಳ ಕಾಲ ಈ ರೀತಿ ಕಾರ್ಯಕ್ರಮಗಳು ನಡೆಯಿತು.

ನವಂಬರ್ ೨೯ರಂದು ತ್ಯಾಜ್ಯ (ಹಸಿ ಕಸ,ವನ ಕಸ) ವಿಂಗಡನೆ ಅಮೃತ ದಿವಸ, ನವಂಬರ್ ೩೦ರಂದು ಜನರ ಪಾಲುದಾರಿಕೆಯೊಂದಿಗೆ ಸ್ವಚ್ಛ ಸಾರ್ವಜನಿಕ ಶೌಚಾಲಯಗಳ ಅಮೃತೋತ್ಸವ ,ಅಕ್ಟೋಬರ್ ೧ರಂದು ಉದ್ಯಮಿಗಳ ಸನ್ಮಾನ ಮಾಡಲಾಯಿತು ಕಸದಿಂದ ಕಲೆ ಮತ್ತು ವಸ್ತು ಪ್ರದರ್ಶನ ಹಾಗೂ ಪಾತ್ರೆ ಭಂಡರ . ಅಕ್ಟೋಬರ್ ೨ರಂದು ಸಪಾಯಿ ಮಿತ್ರ ಘನತೆ ಅಮೃತ ಆಚರಣೆ ಮಾಡಲಾಯಿತು,

ಈ ನಾಲ್ಕು ದಿನಗಳ ಕಾಲ ಮನಗೂಳಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಗೂ ಸಂಗೊಳ್ಳಿ ರಾಯಣ್ಣ ಕಮಿಟಿಯ ಎಲ್ಲಾ ಸದಸ್ಯರು ಸೇರಿಕೊಂಡು ರಸ್ತೆ ಮೇಲೆ ಬಿದ್ದಿರುವ ಕಸ ತೆಗೆದು ಸ್ವಚ್ಛತೆಯನ್ನು ಮಾಡುವುದರ ಜೊತೆಗೆ ನಾಲ್ಕು ದಿನದ ಕಾರ್ಯಕ್ರಮ ಮುಗಿಸಲಾಯಿತು.

ಇದೇ ಸಂದರ್ಭದಲ್ಲಿ ಇಂದು ಮನಗೂಳಿ ಪಟ್ಟಣ ಪಂಚಾಯಿತಿಯ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ತದನಂತರ ಮಹತ್ಮಾ ಗಾಂಧೀಜಿ ಅವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಪಂಚಾಯಿತಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಮನಗೂಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಶ್ರೀ ಶಬ್ಬೀರ್ ರೇವೂರ್ ಕರ ನೆರವೇರಿಸಿದರು.
ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಶ್ರೀ ಬಸಯ್ಯ ನಂದಿಕೋಲಮಠ, ಶ್ರೀ ಮಾಳು ನಾಗರಾಳ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರ ಎಲ್ಲರೂ ಉಪಸ್ಥಿತರಿದ್ದರು.
ವರದಿ: ಮಲ್ಲಿಕಾರ್ಜುನ ಬುರ್ಲಿ

error: