May 6, 2024

Bhavana Tv

Its Your Channel

ಉಪ ಚುನಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ವಿಜಯಪೂರ : ಸಿಂದಗಿ ಉಪ ಚುನಾವಣೆ ಹಿನ್ನಲೆ ಮತ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿ ಡಿ ವೈ ಎಸ್ ಪಿ ಶ್ರೀಧರ್ ದೊಡ್ಡಿ ಹೇಳಿದರು .

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಉಪ ಚುನಾವಣೆಯನ್ನು ಭಯ ಮುಕ್ತವಾಗಿ ನಡೆಸುವ ಹೊಣೆ ನಮ್ಮದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಿಂದಗಿ ಮತಕ್ಷೇತ್ರದ ಸುತ್ತ ಒಟ್ಟು ೭ ಕಡೆ ಚೆಕ್ ಪೋಸ್ಟ್ ಹಾಕಲಾಗಿದ್ದು ಸಿಂದಗಿ ,ಮೋರಟಗಿ , ಬಮ್ಮನಜೋಗಿ , ವಿಭೂತಿಹಳ್ಳಿ , ಗೋಲಗೆರೆ , ದೇವಣಗಾವ, ಕಲಕೇರಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಹೆಚ್ಚುವರಿಯಾಗಿ ಓರ್ವ ಡಿಸಿಪಿ ೪ ಜನ ವೃತ್ತ ನಿರೀಕ್ಷಕರು , ೯ ಜನ ಎಸ್ ಐ, ೩೫ ಜನ ಎ ಎಸ್ ಐ ಗಳನ್ನು ಸರ್ಕಾರದಿಂದ ನೇಮಕ ಮಾಡಲಾಗಿದೆ . ಈ ಭಾಗದಲ್ಲಿ ಯಾವುದೇ ತೊಂದರೆಗಳು ಇದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದರು .
ಸಂಪರ್ಕ ಸಂಖ್ಯೆ : ೯೪೮೦೮೦೪೨೨೨

ವರದಿ : ಬಿ ಎಸ್ ಹೊಸೂರ. ಇಂಡಿ

error: