May 5, 2024

Bhavana Tv

Its Your Channel

ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಪಾದಯಾತ್ರೆ .

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇಂದು ೪೧ ದಿನದ ಧರಣಿ ಸತ್ಯಾಗ್ರಹ ಮತ್ತು ಪಾದಯಾತ್ರೆಯನ್ನು ಬಸನಾಳ ದಿಂದ ಪ್ರಾರಂಭವಾಗಿ ಕೋಟ್ಟನ್ನಾಳ, ಅಗಸನಾಳ, ಕೋಳೂರಗಿ,ಸವಳಸಂಗ, ಹೂರ್ತಿ, ನಿಂಬಾಳ, ಗ್ರಾಮಗಳ ಮುಖಾಂತರ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬಿ ಡಿ ಪಾಟೀಲ ನೇತೃತ್ವದಲ್ಲಿ ಸಾವಿರಾರು ರೈತರು ಪಾದಯಾತ್ರೆ ಮೂಲಕ ಸಂಚರಿಸಿ ಸರ್ಕಾರ ನೀರಾವರಿ ವಿಷಯದಲ್ಲಿ ರಾಜಕೀಯ ಮಾಡದೆ.ರೈತರ, ಹಾಗೂ ನೀರಾವರಿ ವಿಷಯದಲ್ಲಿ ಯಾರೆ ಧ್ವನಿಯೆತ್ತಿ ಪ್ರಶ್ನಿಸಿದರೆ ಉತ್ತರಿಸಿ ರೈತರಿಗೆ ನ್ಯಾಯ ನೀಡುವುದು ಚುನಾಯಿತ ಸರಕಾರದ ಕರ್ತವ್ಯ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಮಾತನಾಡಿದರು.
ಯುವ ಜನತಾದಳದ ಜಿಲ್ಲಾ ಅಧ್ಯಕ್ಷರಾದ ಸುನೀಲ ರಾಠೋಡ ಮಾತನಾಡಿ ಇಂಡಿ ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಸುಮಾರು ಒಂದು ತಿಂಗಳಿAದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೋಂಡರೂ ಸರ್ಕಾರ ಮೌನವಾಗಿ ಕುಳಿತಿರುವದು ನೋಡಿದರೆ ಮಾತು ಬಾರದ ಮೂಕ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಶೈಲಗೌಡ ಪಾಟೀಲ ಮಾತನಾಡಿ ಇಂಡಿ ತಾಲೂಕಿನ ಪಶ್ಚಿಮ ಭಾಗ ನೀರಾವರಿ ಯೋಜನೆಗಳಿಂದ ವಂಚಿತವಾದ ಪ್ರದೇಶವಾಗಿದೆ ಸ್ವಾತಂತ್ರ‍್ಯ ಲಭಿಸಿ ೭೫ ವರ್ಷಗತಿಸಿದರು ಗುಳೆ ಹೋಗುವುದು ಈ ಭಾಗದ ಜನರು ಒಂದು ಜನ್ಮಸಿದ್ಧ ಹಕ್ಕಾಗಿದೆ ಗುತ್ತಿ ಬಸವಣ್ಣ ಏತ ನೀರಾವರಿ ಹಾಗೂ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಅನುಷ್ಠಾನವಾದರೆ ಈ ಭಾಗದ ರೈತರ ಸಮಸ್ಯೆಗಳು ಬಗೆಹರಿಸಲು ಸಾದ್ಯವೆಂದು ಮಾತನಾಡಿದರು.
ಪಾದಯಾತ್ರೆಯಲ್ಲಿ ಸೋಮು ಸೋಲಾಪೂರ, ಶ್ರೀಕಾಂತ ಪೂಜಾರಿ, ಶಂಕರಪ್ಪ ಮೆಟಗಾರ, ಭೀಮರಾಯ ಪೂಜಾರಿ, ಬಸವರಾಜ ಹಂಜಗಿ ಬಾಳು ರಾಠೋಡ, ದುಂಡು ಬಿರಾದಾರ, ಯಲ್ಲು ಹೂಗಾರ,, ಬಾಬು ಮುಲ್ಲಾ, ಶ್ರೀಶೈಲ ಅಜನಾಳ, ಅಮಸಿದ್ದ ಗೋಡೆಕರ, ಮಲ್ಲು ಗೋಡಿಹಾಳ, ದುಂಡಪ್ಪ ಝಳಕಿ, ಪರಶುರಾಮ ಕಾಂಬಳೆ, ಅಪ್ಪಾಸಾಹೇಬ ಪೂಜಾರಿ, ಜಯರಾಮ ರಾಠೋಡ,ರಾಜು ಚವ್ಹಾಣ,ಸುಭಾಸ ರಾಠೋಡ, ಕಾಂತು ಗಾಡಿವಡ್ಡರ, ರಾಯಪ್ಪ ಗುಗದಡ್ಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.

error: