May 6, 2024

Bhavana Tv

Its Your Channel

ಇಂಡಿ; ನಿಂಬೆ ನಾಡಿನ ಬಬಲಾದ ಗ್ರಾಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವರದಿ ಬಿ ಎಸ್ ಹೊಸೂರ.

ವಿಜಯಪೂರ ಜಿಲ್ಲೆಯ ಇಂಡಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ ರವರ ೫೪ ನೇ ಜನ್ಮ ದಿನದ ನಿಮಿತ್ತವಾಗಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕು|| ವಿಠೋಬಾ ರಾಜು ದಶವಂತ ರವರ ೨೯ನೇ ಜನ್ಮ ದಿನದ ಅಂಗವಾಗಿ ಪ್ರೀತು ದಶವಂತ ಜನಸೇವಕ ಬಳಗದಿಂದ ರಕ್ತದಾನ ಶಿಬಿರವು ಬಿ ಎಲ್ ಡಿ ಇ ಆಸ್ಪತ್ರೆ ರಕ್ತಭಂಡಾರ ವಿಭಾಗದವರ ಹಾಗೂ ಪ್ರಾಥಮಿಕ ಆರೋಗ್ಶಕೇಂದ್ರ ಹೋರ್ತಿ ಇವರ ಉಪಸ್ಥಿಯಲ್ಲಿ ಭಾನುವಾರ ವಿಶ್ವಜ್ಞಾನಿ ಗ್ರಂಥಾಲಯ ಬಬಲಾದ ಇಲ್ಲಿ ಯಶಸ್ವಿಯಾಗಿ ಜರುಗಿತು.ರಕ್ತದಾನ ಶಿಬಿರದಲ್ಲಿ ೩೭ಜನ ರಕ್ತದಾನ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಮಾತನಾಡಿ ರಕ್ತದಾನವು ಜೀವ ಉಳಿಸುವ ಸಂಜೀವಿನಿ ಇದ್ದಂತೆ ರಕ್ತಕ್ಕೆ ಪರ್ಯಾಯ ಮಾರ್ಗವಿಲ್ಲ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಅಂತೆಯೇ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನಷ್ಯನ ದೇಹವಿಡೀ ಸಂಚರಿಸಿ, ಜೀವವನ್ನೇ ಹಿಡಿಕೊಂಡಿರುವ ಕೆಂಪು ವರ್ಣದ ದ್ರವ ರಕ್ತವಾಗಿದೆ.

ಚವಡಿಹಾಳ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಿ ಜಿ ಪಾರೆ ರವರು ಮಾತನಾಡಿ ರಕ್ತದಾನ ಶ್ರೇಷ್ಠ ದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯ ಇದೆಯೋ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ನಾವು ಕೊಡುವ ಒಂದು ಬಾಟಲ್ ರಕ್ತ ಮೂರು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕೆ ಇಂದಿನ ಕಾಲದಲ್ಲೂ ಇದೆ.
ಇದರೊಂದಿಗೆ ಗೊಂದಲ, ಆತಂಕ ಕೂಡ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಕೆಡುವುದಿಲ್ಲ. ರಕ್ತದಾನದ ಕುರಿತಾಗಿರುವ ಜನರಲ್ಲಿರುವ ಗೊಂದಲ, ಆತಂಕ ದೂರ ಗೊಳಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಹೋರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ||ನಿಖಿಲ ದೊಡಮನಿ ಮಾತನಾಡಿ ಆರೋಗ್ಯವಂತನ ದೇಹದಲ್ಲಿ ಸುಮಾರು ೫-೬ ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನದಲ್ಲಿ ಕೇವಲ ೩೫೦ ಮಿ.ಲೀ ರಕ್ತವನ್ನು ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗಳಿಗೆ ಯಾವುದೇ ಅಪಾಯವಿಲ್ಲ. ರಕ್ತಕ್ಕೆ ವರ್ಷ ವಿಡೀ ನಿರಂತರ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ , ಶಸ್ತ್ರ ಚಿಕಿತ್ಸೆಗಳು ಬರುತ್ತಲೇ ಇರುತ್ತವೆ. ಇದರೊಂದಿಗೆ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿಯರಿಗೆ, ಥ್ಯಾಲಸೀಮಿಯ, ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನವನ್ನು ಅವಲಂಬಿಸಿದ್ದಾರೆ. ಒಂದು ಬಾರಿ ದಾನಿಗಳಿಂದ ಶೇಖರಿಸ್ಪಟ್ಟ ರಕ್ತದಲ್ಲಿ ಕೇವಲ ೩೫ ದಿನಗಳ ವರೆಗೆ ಶಕ್ತಿ ಉಳಿಯುತ್ತದೆ. ೩೫ ದಿನಗಳ ಅನಂತರ ರಕ್ತ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ನಿರಂತರ ರಕ್ತದಾನ ಮಾಡಿದ್ದಲ್ಲಿ ಮಾತ್ರ ಜೀವ ಉಳಿಸಲು ಸಾಧ್ಯ. ಸ್ವಯಂಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನ ಮಾಡುವ ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದರು.
ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ.
ಪ್ರತಿ ವರ್ಷ ರಕ್ತ ಹಾಗೂ ರಕ್ತದ ಉತ್ಪನ್ನಗಳ ವರ್ಗಾವಣೆಯಿಂದಾಗಿ ಮಿಲಿಯನ್‌ಗಳಷ್ಟು ಜೀವಗಳು ಉಳಿಯುತ್ತವೆ. ರಕ್ತದಾನ ಜೀವ ಹೋಗುವ ಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚು ಕಾಲ ಬದುಕಲು ಮತ್ತು ಉನ್ನತ ಮಟ್ಟದ ಜೀವನ ಸಾಗಿಸಲು ನೆರವಾಗುತ್ತದೆ. ಪ್ರತಿಯೊಬ್ಬ ನಾಗರಿಕರು ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ಅಂತಹ ಪುಣ್ಯದ ಕೆಲಸ ಮತ್ತೊಂದು ಇಲ್ಲ. ಆಪತ್ಕಾಲದಲ್ಲಿರುವವರಿಗೆ ಆಪತ್ಬಾಂಧವರು ಆಗಬೇಕು ಆಗ ಮಾತ್ರ ಮಾನವೀಯತೆಯ ಮೌಲ್ಯಗಳು ಜೀವಂತವಾಗಿರುತ್ತವೆ. ಪ್ರತಿ ಗ್ರಾಮಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದಾನ ಮಾಡಿದರೆ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತ ಕೊರತೆಯನ್ನು ನೀಗಿಸಲು ಮಾತ್ರ ಸಾಧ್ಯ. ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳು ಜೀವದಾನಿಗಳು ಅಂತ ತಿಳಿಸಿದರು .

ಕಾರ್ಯಕ್ರಮದಲ್ಲಿ ಬಬಲಾದ ಗ್ರಾಮ ಪಂಚಾಯತ ಅಧ್ಶಕ್ಷೆಯರಾದನೀಲಾಂಬಿಕಾ ಗಿರಮಲ್ಲ ಬುಯ್ಶಾರ ಉಪಾಧ್ಶಕ್ಷರಾದ ಸಿದರಾಯಗೌಡ ಬಾ ಬಿರಾದಾರ ಹಾಗೂ ಗ್ರಾಮ ಪಂಚಾಯತ ಸರ್ವ ಸದಸ್ಯರು ಹಾಜರಿದ್ದರು. ಹಾಗೂ ಜನಧ್ವನಿ ಆದಂತಹ ಅಣ್ಣು ಪೂಜಾರಿ ಸಿಇಓ ಪಿಕೆಪಿಎಸ್ ಹೋರ್ತಿ ಹಾಗೂ ಬೆಂಬಲಿಗರು ಹಾಜರಿದ್ದರು ಮತ್ತು ಶ್ರೀ ಬಾಪೂರಾಯಗೌಡ ಬಿರಾದಾರಹಣಮಂತ ಬಿರಾದಾರ? ಮಲ್ಲಿಕಾರ್ಜುನ ದಶವಂತ ಮತ್ತು ಗ್ರಾಮದ ಮುಖಂಡರು ಹಾಗೂ ಆಶಾಕಾರ್ಯಕರ್ತೆಯರು, ಶೂಶ್ರುಷಾಧಿಕಾರಿಗಳು ಭಾಗವಹಿಸಿದ್ದರು. ಪ್ರೀತು ದಶವಂತ ನಿರೂಪಿಸಿದರು, ವಿಠೋಬಾ ದಶವಂತ ಸ್ವಾಗತಿಸಿದರು, ಪರಸುರಾಮ ದಶವಂತ ವಂದಿಸಿದರು.

error: