April 26, 2024

Bhavana Tv

Its Your Channel

ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-೨೨ ಕ್ರೀಡಾಕೂಟಕ್ಕೆ ಬಾಬು ಪಾಂಡ್ರಮಿಸೆ ಆಯ್ಕೆ

ಯಲ್ಲಾಪುರ : ಪಟ್ಟಣದ ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಪದವಿಪೂರ್ವ ಕಾಲೇಜಿನ ಪ್ರಥಮ ಕಲಾ ವಿಭಾಗದ ಬಾಬು ಜಾನು ಪಾಂಡ್ರಮಿಸೆಯವರು ವಿದ್ಯಾರ್ಥಿಯು ಮಾ.೨೮ರಿಂದ ೩೧ರವರೆಗೆ ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ೨೦ನೇ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-೨೨ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಬೆಂಗಳೂರಿನಲ್ಲಿ ಮಾ.೧೪, ೧೫ರಂದು ನಡೆದ ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಉದ್ದ ಜಿಗಿತ, ಎತ್ತರ ಜಿಗಿತ, ೨೦೦ಮೀ ಓಟ, ೪೦೦ಮೀ ಓಟದಲ್ಲಿ ವಿಜೇತನಾಗಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರವಿಕುಮಾರ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಲವಂತ ಭಟ್ಟ, ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ವರದಿ ; ವೇಣುಗೋಪಾಲ ಮದ್ಗುಣಿ

error: