April 22, 2021

Bhavana Tv

Its Your Channel

ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ೬ಕೆಜಿ ೫೦೦ ಗ್ರಾಂ ಒಣಗಿದ ಗಾಂಜಾ ವಶ ಹಾಗೂ ಒಬ್ಬ ವ್ಯಕ್ತಿಯ ಬಂಧನ.

ವಿಜಯಪೂರ; ಜಿಲ್ಲೆಯ ಇಂಡಿ ತಾಲೂಕಿನ ಹಡಲಸಂಗದ ವಿಜಯನಗರ ತಾಂಡಾ ನಂ ೨ ರಲ್ಲಿ ಇಂಡಿ ವಲಯದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ೬ ಕೆಜಿ ೫೦೦ ಗ್ರಾಂ ಒಣಗಿದ ಗಾಂಜಾವನ್ನು ಹಾಗೂ ಒಬ್ಬ ವ್ಯಕ್ತಿಯ ಬಂಧನ ಅಂದಾಜು ಮೌಲ್ಯ ೯೭೫೦೦ ರೂ ಇಂಡಿ ವಲಯ ವ್ಯಾಪ್ತಿಯ ಇಂಡಿ ತಾಲೂಕಿನ ಹಡಲಸಂಗದ ವಿಜಯನಗರ ತಾಂಡಾ ೨ ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಹೊಂದಿದ ೬.೫ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಮಾನ್ಯ ಅಬಕಾರಿ ಅಪರ ಆಯುಕ್ತರು ಅಪರಾಧ ಕೇಂದ್ರಸ್ಥಾನ ಬೆಳಗಾವಿ ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಬೆಳಗಾವಿ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ವಿಜಯಪುರ ಜಿಲ್ಲೆ ಮತ್ತು ಅಬಕಾರಿ ಉಪ ಅಧಿಕ್ಷಕರು ಉಪ ವಿಭಾಗ ವಿಜಯಪೂರ ರವರ ಮಾರ್ಗದರ್ಶನದಲ್ಲಿ ಮಾನ್ಯ ತಹಶಿಲ್ದಾರರು ಇಂಡಿ ರವರ ನೇತ್ರತ್ವದಲ್ಲಿ ಎಮ್ ಎಚ್ ಪಡಸಲಗಿ ಅಬಕಾರಿ ನೀರಿಕ್ಷಕರು ಹಾಗೂ ವಿಜಯಕುಮಾರ ಹಿರೇಮಠ ಅಬಕಾರಿ ಉಪ ನೀರೀಕ್ಷಕರು ಇಂಡಿ ವಲಯ ತಂಡ ರಚಿಸಿ ಇಂಡಿ ತಾಲೂಕಿನ ಹಡಲಸಂಗದ ವಿಜಯನಗರ ತಾಂಡಾ ನಂ ೨ ಮೂಲದ ಗೇಮು ನಾಯಕ (೪೦) ಇತನನ್ನು ಬಂಧಿಸಲಾಗಿದೆ ಜಪ್ತಿಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ೯೭೫೦೦ ರೂ ಅಬಕಾರಿ ಉಪ ನೀರಿಕ್ಷಕರಾದ ವಿಜಯಕುಮಾರ ಹಿರೇಮಠ ರವರ ಪಿರ್ಯಾದಿ ಮೇರೆಗೆ ಈ ಪ್ರಕರಣವನ್ನು ಎಮ್ ಎಚ್ ಪಡಸಲಗಿ ಅಬಕಾರಿ ನೀರಿಕ್ಷಕರು ಇಂಡಿ ವಲಯ ಇವರು ಎಸ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದು ವರಿಸಿದ್ದಾರೆ ದಾಳಿಯಲ್ಲಿ ಪಾಲ್ಗೊಂಡ ಸಬ್ಬಂದಿ ಶಿವಶಂಕರ ಗೊಟ್ಯಾಳ.ಸಂಜಯ ಕುಲಕರ್ಣಿ.ಸಂಜಿವಕುಮಾರ ಹೂವಿನವರ.ಶಿವರುದ್ರ ದಳವಾಯಿ.ಮಂಜುನಾಥ ಬಡಿಗೇರ ಇದ್ದರು ಈ ಸಂದರ್ಭದಲ್ಲಿ ತಹಶಿಲ್ದಾರರಾದ ಚಿದಂಬರ ಕುಲಕರ್ಣಿ. ಎಮ್ ಎಚ್ ಪಡಸಲಗಿ.ಅಬಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

error: