May 2, 2024

Bhavana Tv

Its Your Channel

ನಾರೇಮದ್ದೇಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ತಿçà ಶಕ್ತಿ ಗುಂಪುಗಳಿಗೆ ಶಾಸಕ ಸುಬ್ಬಾರೆಡ್ಡಿ ರವರಿಂದ ಸಾಲ ವಿತರಣೆ

ಬಾಗೇಪಲ್ಲಿ:- ತಾಲ್ಲೂಕು ಪಾತಪಾಳ್ಯ ಹೋಬಳಿ ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯ ಕಾವೇರಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಮುದಾಯ ಬಂಡವಾಳ ನಿಧಿ ವತಿಯಿಂದ ೨೮ ಮಹಿಳಾ ಸ್ವಸಹಾಯ ಗುಂಪುಗಳು ಇದ್ದು ಇದರಲ್ಲಿ ೧೪ ಮಹಿಳಾ ಸ್ವಸಹಾಯ ಗುಂಪುಗಳಿಗೆ ೧೩ ಲಕ್ಷ ರೂಪಾಯಿಗಳನ್ನು, ಸಾಮಾನ್ಯ ಮಹಿಳೆ ಸ್ವಸಹಾಯ ಗುಂಪುಗಳಿಗೆ ೭೫,೦೦೦/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಸ್ವಸಹಾಯ ಗುಂಪುಗಳಿಗೆ ೧,೨೫,೦೦೦/- ಸಾಲದ ಮೊತ್ತ ಚಕ್ ಅನ್ನು ಬಾಗೇಪಲ್ಲಿ ತಾಲ್ಲೂಕು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಅನುದಾನ ಬಿಡುಗಡೆ ಮಾಡಿದರು.
ನಂತರ ಮಾತನಾಡಿ ಈ ಯೋಜನೆ ಕೇಂದ್ರ ಸರ್ಕಾರಾದ ಯೋಜನೆ ಯಾಗಿದೆ ಈ ಯೋಜನೆ ಮಹಿಳೆಯರು ಬಡತನದ ತೀವ್ರತೆಯನ್ನು ಕಡಿಮೆ ಮಾಡುವುದೇ ಓಖಐಒ. ಯೋಜನೆ ಯಶಸ್ವಿಯಾಗಿ ನೆಡೆಸಿಕೊಂಡು ಹೋಗಬೇಕು. ಬಂಡವಾಳದ ನೆರವಿನಿಂದ ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಮಹಿಳೆಯರು ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಸಾಕಣೆ, ಗುಡಿ ಕೈಗಾರಿಕೆ, ಟೈಲರಿಂಗ್, ಹೋಟೆಲ್ ಉದ್ಯಮ ಇತ್ಯಾದಿಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕ್ ಅಭಿವೃದ್ಧಿ ಅಧಿಕಾರಿ ಮಂಜುನಾಥಸ್ವಾಮಿ, ತಾಲ್ಲೂಕ್ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಶಿವಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬೂರಗಮಡುಗು ನರಸಿಂಹಪ್ಪ, ಟಿ.ಶ್ರೀನಿವಾಸ್, ಮಾಜಿ ಕೆ.ಡಿ.ಪಿ.ಸದಸ್ಯರಾದ ಅಮರನಾಥ್ ರೆಡ್ಡಿ, ನಾರೆಮದ್ದೇಪಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಂಬಿಕಾ ಪ್ರಶಾಂತ್, ಉಪಾಧ್ಯಕ್ಷ ಪ್ರಮೀಳಾ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಎನ್.ಎಚ್.ಮೌಲಾಲಿ, ಕಿಟ್ಟ, ರವಿ, ಮುಖಂಡರಾದ ಶ್ರೀನಾಥ್, ಕೃಷ್ಣಾರೆಡ್ಡಿ, ಕಾವೇರಿ ಸಂಜೀವಿನಿ ಶ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಜಾತ ರಾಮಂಜಿ, ಪಾರ್ವತಿ, ವರಲಕ್ಷ್ಮೀ ಹಾಗೂ ಹಲವಾರು ಮುಖಂಡರು ಹಾಗೂ
ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು

ವರದಿ : ಗೋಪಾಲ ರೆಡ್ಡಿ, ಬಾಗೇಪಲ್ಲಿ

error: