April 26, 2024

Bhavana Tv

Its Your Channel

ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಉಚಿತ ತೊಗರಿ ಕಿಟ್ ವಿತರಣೆ

ಬಾಗೇಪಲ್ಲಿ: ತಾಲ್ಲೂಕು ಮಿಟ್ಟೇಮರಿ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ೨೦೨೧-೨೨ನೇ ಸಾಲಿನ ಮುಂಗಾರು ಹಂಗಾಮಿಗೆ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ತೊಗರಿ ಬೀಜಗಳ ಕಿರು ಚೀಲಗಳು ಉಚಿತವಾಗಿ ರೈತರಿಗೆ ವಿತರಣೆ ಕಾರ್ಯಕ್ರಮಕ್ಕೆ ಗೂಳೂರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬೂರಗಮಾಡು ಲಕ್ಷ್ಮೀ ನರಸಿಂಹಪ್ಪ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ ಮೂಲಕ ಮಿಟ್ಟೇಮರಿ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ತೊಗರಿ ಬೀಜಗಳನ್ನು ಕೆಲವರಿಗೆ ಉಚಿತವಾಗಿ ಬಿತ್ತನೆ ತೊಗರಿ ೪.೨ ಕ್ವಿಂಟಾಲ್ ಕಿಟ್ ಅನ್ನು ಸುಮಾರು ೧೧೦ ರೈತರಿಗೆ ವಿತರಣೆ ಮಾಡಲಾಯಿತು. ರೈತರ ಬೀಜವನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ ಅವರು ಮಾತನಾಡಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾದನ ಅಡಿಯಲ್ಲಿ ತೊಗರಿ ಬೀಜವನ್ನು ಆಯಾ ರೈತ ಸಂಪರ್ಕದ ಮೂಲಕ ರೈತರಿಗೆ ತೊಗರಿ ಉಚಿತವಾಗಿ ವಿತರಣೆ ಮಾಡಲಾಗಿದೆ. ಕೊರೊನಾದ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬೀಜಗಳನ್ನು ಸ್ವೀಕರಿಸಬೇಕು. ರೈತ ಸಂಪರ್ಕ ಕೇಂದ್ರಕ್ಕೆ ಬರುವ ಮುಂಚೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸರದಿಯಲ್ಲಿ ನಿಂತು ಯಾವುದೇ ಗಲಾಟೆ ಮಾಡದೇ ಬೀಜವನ್ನು ಸ್ವೀಕರಿಸಬೇಕು. ಯಾರಿಗೂ ತೊಂದರೆಯಾಗದAತೆ ಎಲ್ಲರಿಗೂ ಬೀಜ ವಿತರಿಸಲಾಗುವುದು. ಅಗತ್ಯವಿರುವ ರೈತರು ಬೀಜಗಳನ್ನು ಪಡೆದುಕೊಂಡು ಬಿತ್ತನೆ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮೀ ನರಸಿಂಹಪ್ಪ, ಬಾಗೇಪಲ್ಲಿ ತಾಲ್ಲೂಕು ಕೃಷಿ ನಿರ್ದೇಶಕರಾದ ಕೆ.ಸಿ.ಮಂಜುನಾಥ, ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಜರಿದ್ದರು.

error: