May 3, 2024

Bhavana Tv

Its Your Channel

ಕೃಷ್ಣಾ ನದಿಯ ನೀರು ಬಾಗೇಪಲ್ಲಿ ಕ್ಷೇತ್ರಕ್ಕೆ ಹರಿಸುವುದೆ ನನ್ನ ಗುರಿ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಆಂಧ್ರದ ಕೃಷ್ಣಾ ನದಿಯ ಕಾಲುವೆ ನೀರನ್ನು ಬಾಗೇಪಲ್ಲಿ ಕ್ಷೇತ್ರಕ್ಕೆ ಹರಿಸಿ ಗ್ರಾಮಗಳನ್ನು ಅಭಿವೃದ್ಧಿ ಮಾಡುವುದೇ ನನ್ನ ರಾಜಕೀಯ ಉದ್ದೇಶವಾಗಿದೆ ಹೊರತು ಕಾರು ಆಸ್ತಿ ಮಾಡುವುದಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಗೊರ್ತಪಲ್ಲಿ ಗ್ರಾಮದಲ್ಲಿ ಅಯೋಜಿಸಿದ್ದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಧಿಕಾರದ ಅಸೆಗಾಗಿ ಕ್ಷೇತ್ರಕ್ಕೆ ಲಗ್ಗೆ ಇಟ್ಟಿರುವ ಕೆಲ ರಾಜಕಾರಣಿಗಳು ಸುಬ್ಬಾರೆಡ್ಡಿ ದುಡ್ಡು ಮಾಡುವುದಕ್ಕೆ ರಾಜಕೀಯಕ್ಕೆ ಬಂದಿದ್ದಾರೆAದು ಇಲ್ಲ ಸಲ್ಲದ ಆರೋಪಗಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಶಾಸಕರಾಗಬೇಕೆಂದು ಫೋಜ್ ಕೊಡುತ್ತಿರುವ ರಾಜಕೀಯ ಎದುರಾಳಿಗಳ ಮಾತಿಗೆ ಕ್ಷೇತ್ರದ ಜನರು ಕಿವಿಗೊಡಬೇಡಿ. ಬಡ ಕುಟುಂಬದಲ್ಲಿ ಹುಟ್ಟಿ ಬೆಂಗಳೂರು ನಗರಕ್ಕೆ ತೆರಳಿ ಸಣ್ಣದಾಗಿ ಉದ್ಯಮಿ ಪ್ರಾರಂಭಿಸಿ ಸಂಪಾದನೆ ಮಾಡಿರುವ ಹಣದಿಂದ ಹಲವು ಸಮಾಜ ಸೇವೆಗಳು ಮಾಡುವುದರ ಮೂಲಕ ಕ್ಷೇತ್ರದ ಜನರ ಹೃದಯದಲ್ಲಿ ಸ್ಥಾನ ಸಂಪಾದಿಸಿರುವ ನಾನು ಕ್ಷೇತ್ರದ ಜನರ ಕಷ್ಟ ಸುಖಗಳ ಬಗ್ಗೆ ಅಲೋಚಿಸುತ್ತೇನೆ ಹೊರತು ಒಳ್ಳೆಯ ಕಾರು ಬಂಗ್ಲೆ, ಆಸ್ತಿ ಮಾಡಿ ಪೋಜ್ ಕೊಡುವ ಉದ್ದೇಶಕ್ಕಾಗಿ ಶಾಸಕನಾಗಿಲ್ಲ. ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಹರಿಯುತ್ತಿರುವ ಕೃಷ್ಣ ನದಿ ನೀರಿನಲ್ಲಿ ರಾಜ್ಯದ ಪಾಲು ಇದ್ದು, ನಮ್ಮ ಪಾಲಿಗೆ ಬರಬೇಕಾಗಿರುವ ಕೃಷ್ಣಾ ನದಿ ನೀರನ್ನು ಬಾಗೇಪಲ್ಲಿಗೆ ಹರಿಸಬೇಕೆಂದು ಮಾತುಕತೆ ನಡೆಸಲಾಗುತ್ತಿದ್ದು, ಮಾತುಕತೆ ಸಫಲತೆ ಕಂಡು ಈ ಭಾಗಕ್ಕೆ ಕೃಷ್ಣ ನದಿ ನೀರು ಹರಿಯುವುದು ಖಚಿತ ಎಂದು ಜನರಿಗೆ ಭರವಸೆ ನೀಡಿದರು.

ತಾಲೂಕಿನ ಗೂಳೂರು ಹೋಬಳಿಯ ಸಜ್ಜುಪಲ್ಲಿ ಮತ್ತು ಗೊರ್ತಪಲ್ಲಿ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಕಾಮಗಾರಿ ಹಾಗೂ ಸಜ್ಜುಪಲ್ಲಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮತ್ತು ಕಮ್ಮವಾರಪಲ್ಲಿ ಬೋಯಿನವಾರಪಲ್ಲಿ ಮಾರ್ಗ ರಸ್ತೆ ಡಾಂಬರು ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲಬಾಯಿ ಶ್ರೀನಿವಾಸ್‌ನಾಯಕ್, ಉಪಾಧ್ಯಕ್ಷೆ ರೇಣುಕಾ ಶ್ರೀರಾಮ, ತಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಆರ್.ನರೇಂದ್ರಬಾಬು, ಎಸ್.ಎಸ್.ರಮೇಶ್‌ಬಾಬು, ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿ ಎಲ್.ಶಂಕರರೆಡ್ಡಿ, ಕೆಪಿಸಿಸಿ ಸದಸ್ಯ ಅಮರನಾಥರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಪೆದ್ದಮುನಿಯಪ್ಪ, ರಘು, ಲಕ್ಷ್ಮೀನಾರಾಯಣ, ಬೆಸ್ತ ವೆಂಕಟೇಶ್ ಮತ್ತಿತರರು ಇದ್ದರು

ಗೋಪಾಲ ರೆಡ್ಡಿ ಬಾಗೇಪಲ್ಲಿ

error: