December 22, 2024

Bhavana Tv

Its Your Channel

ಶಾಸಕರ ದಿನಕರ ಶೆಟ್ಟಿಯವರಿಂದ ಬಡವರಿಗೆ ತರಕಾರಿ ವಿತರಣೆ

ಗೋಕರ್ಣದ ರೈತರು ಬೆಳೆದ ತರಕಾರಿಗಳನ್ನು ಸೋಮವಾರ ಖರೀದಿಸಿದ ಶಾಸಕ ದಿನಕರ ಶೆಟ್ಟಿ ಅವರು ಬಡಬಗ್ಗರಿಗೆ ಹಾಗೂ ತೀರಾ ಅಗತ್ಯವುಳ್ಳವರಿಗೆ ತಮ್ಮ ನಿವಾಸದಲ್ಲಿ ಹಂಚಿದರು.

ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕರೊನಾ ತಡೆ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಕ್ಷೇತ್ರದ ರೈತರು ಬೆಳೆದ ತರಕಾರಿ ಕೊಳ್ಳುವವರಿಲ್ಲದೇ ವ್ಯರ್ಥವಾಗಬಾರದು. ಅಗತ್ಯವುಳ್ಳವರಿಗೆ ಪ್ರಯೋಜನವಾಗಬೇಕು. ಹೀಗಾಗಿ ಗೋಕರ್ಣದ ಮೆಣಸು, ಬದನೆ, ಚವಳಿ, ತೊಂಡೆ ಇನ್ನಿತರ ತರಕಾರಿಗಳನ್ನು ಖರೀದಿಸಿ ನನ್ನ ಕ್ಷೇತ್ರದ ಬಡಬಗ್ಗರಿಗೆ, ತೀರಾ ಅಗತ್ಯವುಳ್ಳವರಿಗೆ ಹಂಚುತ್ತೇನೆ. ಇಂಥ ಸಾಂಕ್ರಾಮಿಕದ ತುರ್ತು ಸಂದರ್ಭದಲ್ಲಿ ಎಲ್ಲವೂ ಸರ್ಕಾರದಿಂದಲೇ ಸಾಧ್ಯವಿಲ್ಲ. ನಮ್ಮಿಂದಾದ ಸಹಯೋಗವನ್ನು ನೀಡಬೇಕಾಗುತ್ತದೆ ಎಂದರು.
ಈ ವೇಳೆ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ ಮಾತನಾಡಿ, ಪಟ್ಟಣದಲ್ಲಿ ೫ ವಾಹನಗಳ ಮೂಲಕ ಎರಡು ದಿನಗಳಲ್ಲಿ ೨೫೦೦ ಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ ೨೦೦ ರೂಗಳ ತರಕಾರಿ ಕಿಟ್ ವಿತರಿಸಿದ್ದೇವೆ. ತರಕಾರಿ ಲಭ್ಯತೆಯ ಕೊರತೆಯಿಂದ ಎಲ್ಲ ವಾರ್ಡುಗಳನ್ನು ತಲುಪುವುದು ಕಷ್ಟವಾಗುತ್ತಿದೆ. ವಾರಕ್ಕೆ ಒಮ್ಮೆಯಾದರೂ ಪಟ್ಟಣದ ಪ್ರತಿ ಕುಟುಂಬಕ್ಕೆ ತರಕಾರಿ ವಿತರಿಸುವ ವ್ಯವಸ್ಥೆಯ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದರು. ಪುರಸಭೆ ಸದಸ್ಯ ಮಹೇಶ ನಾಯ್ಕ, ಎಂ.ಕೆ.ಶಾನಭಾಗ ಇನ್ನಿತರರು ಇದ್ದರು.

error: