
ಭಟ್ಕಳದಲ್ಲಿ ತಿಮ್ಮಯ್ಯ ದಾಸರಿಂದ ಸಂಸ್ಥಾಪನೆಗೊoಡ ಶ್ರೀ ಶ್ರೀಧರ ವೀರಮಾತಾ ಪದ್ಮಾವತಿ ದೇವಿಯ ರಥೋತ್ಸವವು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿoದ ಸಂಪನ್ನಗೊoಡಿತು. ವರ್ಷಂಪ್ರತಿ ದತ್ತಜಯಂತಿಯoದು ನಡೆಯುವ ಈ ಉತ್ಸವದ ದಿನದಂದು ದೇವಿಯ ಸನ್ನಿಧಿಯಲ್ಲಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಮಧ್ಯಾಹ್ನ ಮಹಾಪೂಜೆಯ ನಂತರದಲ್ಲಿ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ಭೋಜನ ನಡೆಯಿತು. ಸಾಯಂಕಾಲ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ದೇವಾಲಯದಿಂದ ಪುರಬೀದಿಯಲ್ಲಿ ರಥವನ್ನೇರಿ ಸಾಗಿದ ಪದ್ಮಾವತಿ ದೇವಿಗೆ ಮಾರ್ಗದುದ್ದಕ್ಕೂ ಭಕ್ತಾದಿಗಳು ಅವರ ಮನೆಗಳ ಎದುರು ರಂಗೋಲಿ, ದೀಪಗಳನ್ನಿಟ್ಟು ಹಣ್ಣುಕಾಯಿ, ಆರತಿ ಸಮರ್ಪಿಸಿದರು. ಜೈ ಮಾರುತಿ ಚಂಡೆ ಬಳಗದ ಚಂಡೆ ವಾದ್ಯ ಘೋಷದೊಂದಿಗೆ, ನೂರಾರು ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವದ ಮೆರವಣಿಗೆಯು ಸಂಪನ್ನಗೊoಡಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ