April 28, 2024

Bhavana Tv

Its Your Channel

ಭಟ್ಕಳ ಬೃಹತ್ ಲೋಕ ಅದಾಲತ್‌ನಲ್ಲಿ ಅತೀ ಹೆಚ್ಚು ಪ್ರಕರಣಗಳು ಇತ್ಯರ್ಥ

ಭಟ್ಕಳ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಡಿ.18ರಂದು ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಅತೀ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿದ್ದು ಎರಡೂ ನ್ಯಾಯಾಲಯದಲ್ಲಿ ಒಟ್ಟೂ 375 ವಿವಿಧ ಪ್ರಕರಣಗಳು ರಾಜೀಯಿಂದ ಇತ್ಯರ್ಥವಾಗಿದೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್‌ಗೆ ಒಟ್ಟೂ 475 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು ಅಂತಿಮವಾಗಿ 219 ಪ್ರಕರಣಗಳು ಎರಡೂ ಪಕ್ಷಗಾರರು ಒಪ್ಪಿ ರಾಜೀಯಾಗಿವೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್‌ಗೆ ಬಂದಿದ್ದ ಒಟ್ಟೂ 255 ಪ್ರಕರಣಗಳಲ್ಲಿ ಅಂತಿಮವಾಗಿ 156 ಪ್ರಕರಣಗಳು ಎರಡೂ ಪಕ್ಷಗಾರರು ಒಪ್ಪಿ ರಾಜೀಯಾಗಿವೆ.
ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಭಾಗವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ, ಕಾರ್ಯದರ್ಶಿ ಜೆ.ಡಿ.ಭಟ್ಟ, ಹಿರಿಯ ವಕೀಲರುಗಳಾದ ಆರ್. ಆರ್. ಶ್ರೇಷ್ಟಿ, ಎಸ್. ಎಂ. ಖಾನ್, ಸಿ.ಎಂ.ಭಟ್ಟ, ನಾಗರಾಜ ಈ.ಎಚ್., ಎಸ್.ಬಿ. ಬೊಮ್ಮಾಯಿ, ಕೆ.ಎಚ್.ನಾಯ್ಕ, ಎಸ್.ಎಂ. ನಾಯ್ಕ, ಎಸ್.ಜೆ. ನಾಯ್ಕ, ಎಂ.ಜೆ.ನಾಯ್ಕ, ರಾಜೇಶ ನಾಯ್ಕ, ವಿ.ಎಫ್.ಗೋಮ್ಸ್, ಗಣೇಶ ದೇವಾಡಿಗ, ಎಂ.ಟಿ. ನಾಯ್ಕ, ನಾಗರಾಜ್ ನಾಯ್ಕ, ಪಾಂಡು ನಾಯ್ಕ, ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.

error: