April 27, 2024

Bhavana Tv

Its Your Channel

ಕ್ರಿಸ್‌ಮಸ್ ಪೂರ್ವದಲ್ಲಿ ಸಂದೇಶ ಸಾರುವ ಸಾಂತಾಕ್ಲಾಸ್

ಭಟ್ಕಳ: ಡಿಸೆಂಬರ್ 25ಕ್ಕೆ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವ ಪೂರ್ವದಲ್ಲಿ ಅನೇಕ ವಿಧಿವಿದಾನಗಳನ್ನು ಪೂರೈಸುತ್ತಾರೆ. ಕ್ರಿಸ್‌ಮಸ್ ಪೂರ್ವದಲ್ಲಿ ಪ್ರತಿ ಮನೆಗೂ ಕೂಡಾ ಕ್ರಿಸ್‌ಮಸ್ ಹಬ್ಬ ಬರುತ್ತಿದೆ ಎನ್ನುವ ಸಂದೇಶವನ್ನು ಸಾವರುವುದಕ್ಕೆ ಸಾಂತಾಕ್ಲಾಸ್ ಮನೆ ಮನೆಗೆ ಬರುತ್ತಾನೆ. ಅದೇ ರೀತಿಯಾಗಿ ಈ ವರ್ಷ ಕ್ರಿಸ್‌ಮಸ್ ಪೂರ್ವದಲ್ಲಿ ಸಂದೇಶ ಸಾರಲು ಸಾಂತಾಕ್ಲಾಸ್ ಮನೆ ಮನೆಗೆ ಭೇಟಿ ಕೊಡುತ್ತಿದ್ದಾನೆ.

ಸಾಂತಾಕ್ಲಾಸ್ ಎಂದರೆ ಮೊದಲಿನಿಂದಲೂ ಮಕ್ಕಳಿಗೆ ಬಹು ಇಷ್ಟ ಅವನೊಂದಿಗೆ ಮಕ್ಕಳ ದಂಡೇ ಹಿಂಬಾಲಿಸಿಕೊAಡು ಬರುತ್ತದೆ, ಕ್ರಿಸ್‌ಮಸ್ ಹಬ್ಬ ಬಂತೆAದರೆ ಕ್ರೈಸ್ತರು ಸಂಭ್ರಮೋಲ್ಲಾಸದಿAದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮ ಪಡುವುದು ಸಾಮಾನ್ಯ. ಪ್ರತಿಯೊಂದು ಮನೆ ಮನೆಯಲ್ಲಿಯೂ ಕೂಡಾ ಅತ್ಯಂತ ಸಂಭ್ರಮದಿAದ ಆಚರಿಸುವ ಹಬ್ಬ ಕ್ರಿಸ್‌ಮಸ್, ಕ್ರಿಸ್‌ಮಸ್ ಬಂತು ಎನ್ನುವುದೇ ಅವರಿಗೆ ದೊಡ್ಡ ಸಂಭ್ರಮ. ಈ ಸಂಭ್ರಮವನ್ನು ಸವಿಯಲು ಸಾಂತಾಕ್ಲಾಸ್ ಇಂದಿಗೂ ಕೂಡಾ ಮನೆ ಮನೆಗೆ ಹೋಗಿ ಸಂದೇಶ ಸಾರುವುದನ್ನು ಮುಂದುವರಿಸಿಕೊAಡು ಬಂದಿರುವುದು ವಿಶೇಷವಾಗಿದೆ.
ಭಟ್ಕಳ ಮುಂಡಳ್ಳಿಯ ಅವರ್ ಲೇಡಿ ಆಫ್ ಲೂಡ್ರ‍್ಸ ಮಾತಾ ಚರ್ಚಿನ ಧರ್ಮಗುರುಗಳಾದ ಫಾದರ್ ಪ್ರೇಮ್‌ಕುಮಾರ್ ಅವರ ನೇತೃತ್ವದಲ್ಲಿ ಯುವಕ-ಯುವತಿಯರು ಸಾಂತಾಕ್ಲಾಸ್‌ನೊAದಿಗೆ ಎಸುವಿನ ಜನನದ ಸಂದೇಶವನ್ನು ಹೊತ್ತು ಮುಂಡಳ್ಳಿಯ ಅವರ್ ಲೇಡಿ ಆಫ್ ಲೂಡ್ರ‍್ಸ ಮಾತಾ ಚರ್ಚಿನಿಂದ ಹೊರಟು ಭಟ್ಕಳ ನಗರದಲ್ಲಿನ ಪ್ರಮುಖರ ಮನೆಗಳಿಗೆ ಹೊಸ ವರ್ಷದ ಹಾಗೂ ಕ್ರಿಸ್‌ಮಸ್ ಶುಭಾಷಯವನ್ನು ಕೋರಿದ್ದಲ್ಲದೇ ಹಬ್ಬದ ಮಹತ್ವವನ್ನು ತಿಳಿಸಿ ಪ್ರತಿ ಮನೆಯಲ್ಲಿಯೂ ಕೂಡಾ ದಯಾಮಯಿ ಯೇಸು ಕ್ರಿಸ್ತರ ಜನನದ ಸಂದೇಶವನ್ನು ಸಾರಿ, ಪ್ರಾರ್ಥನೆಯನ್ನು ಸಲ್ಲಿಸುವ ಕಾರ್ಯ ನಡೆಯಿತು.

error: