May 2, 2024

Bhavana Tv

Its Your Channel

ಕಾರ್ಕಳದಲ್ಲಿ ಉಚಿತ ಮಧುಮೇಹ ಮತ್ತು ಮೂತ್ರಪಿಂಡ ರೋಗ , ಹೃದಯ, ಕಣ್ಣು ಕಿವಿ ಮೂಗು ಗಂಟಲು ತಪಾಸಣಾ ಶಿಬಿರ

ಕಾರ್ಕಳ: ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ರೋಟರಿ ಕ್ಲಬ್ ಮಣಿಪಾಲ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪತ್ರಕರ್ತರ ಸಂಘ ಕಾರ್ಕಳ ಸಹಯೋಗದೊಂದಿಗೆ ಉಚಿತ ಮಧುಮೇಹ ,ಮತ್ತು ಮೂತ್ರಪಿಂಡ ರೋಗ , ಹೃದಯ, ಕಣ್ಣು ಕಿವಿ ಮೂಗು ಗಂಟಲು ತಪಾಸಣಾ ಶಿಬಿರವು ಕಾರ್ಕಳ ಟಿ.ಎಂ.ಎ.ಪೈ ಆಸ್ಪತ್ರೆ ಯಲ್ಲಿ ನಡೆಯಿತು.

ಕಾರ್ಕಳ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಯ ಅಧ್ಯಕ್ಷ ಪ್ರಕಾಶ್ ಪೈ ಶಿಬಿರ ಉದ್ಘಾಟಿಸಿ ಮಾತನಾಡಿ ಕಾರ್ಕಳ ತಾಲೂಕಿನ ಟಿ.ಎಂ.ಎ.ಪೈ ಆಸ್ಪತ್ರೆ ಉನ್ನತ ದರ್ಜೆಗೆ ಏರುತಿದ್ದು ಈ ವರ್ಷಾಂತ್ಯದ ಅಂತ್ಯ ದೊಳಗೆ ತ್ರೂಮ ಸೆಂಟರ್ ಆರಂಭವಾಗುವ ಮೂಲಕ ಸ್ಥಳೀಯ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಆರೈಕೆ ಮಾಡಲು ಸಹಕಾರಿ ಯಾಗಬಹುದು ಎಂದರು

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ಆರೋಗ್ಯದ ಹಿತವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.

ಟಿ.ಎA.ಎ ಪೈ ರೋಟರಿ ಆಸ್ಪತ್ರೆಯ ನಟೇಶ್ ಕುಮಾರ್ ಆರೋಗ್ಯದ ಅರಿವು ಮೂಡಿಸಿದರು, ಮಾಜಿ ಪ್ರಾಂಶುಪಾಲ ಗಣೇಶ್ ಬರ್ಲಾಯ ಕಾರ್ಯಕ್ರಮ ಕ್ಕೆ ಶುಭಾ ಹಾರೈಸಿದರು, ಕಾರ್ಕಳ ತಾಲೂಕು ಪತ್ರಕರ್ತರ ಸಂಘ ದ ಸದಸ್ಯರು ಭಾಗವಹಿಸಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: