ಹೊನ್ನಾವರ: ಹೊನ್ನಾವರ ಪೋರ್ಟ್ ಕಂಪನಿ ಇಂದು ಕೆಲಸ ಪ್ರಾರಂಭಿಸಿದನ್ನು ವಿರೋಧಿಸಿ
ಮೀನುಗಾರರ ಸಂಘನೆಯವರು ಮಾಧ್ಯಮಗೋಷ್ಠಿ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತ ಕಂಪನಿಯ ಪರವಾಗಿ ವರ್ತಿಸುತ್ತಿದೆ. ಜಿಲ್ಲೆಯ ಮೀನುಗಾರರ ಸಂಪೂರ್ಣ ವಿರೋಧವಿದ್ದರೂ ಅವರಿಗೆ ಕಾಮಗಾರಿ ಮಾಡಲು ಅವಕಾಶ ನೀಡುತ್ತಿದೆ. ಹೋರಾಟ ಮಾಡುವ ಮೀನುಗಾರರನ್ನು ಹಾಗೂ ಮಹಿಳೆಯರನ್ನು ಬಂಧಿಸಿ ನಮ್ಮ ಹಕ್ಕುಗಳನ್ನು ಧಮನ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರೊಂದಿಗೆ ಸೇರಿ ಮುಂದಿನ ಅಧಿವೇಶನದಲ್ಲಿ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತೆವೆ.ಆರು ತಿಂಗಳ ಮಗುವಿನ ತಾಯಿ ಹಾಗೂ ಅನಾರೋಗ್ಯದ ಮಹಿಳೆಯರನ್ನು ಬಂಧಿಸಿದ್ದನ್ನು ನಾವು ಉಗ್ರವಾಗಿ ಖಂಡಿಸುತ್ತೆವೆ. ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜಾಧ್ಯಾಕ್ಷ ರಾಮ ಮೊಗೇರ ,ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಕೋಚರೆಕರ, ಮುಖಂಡರಾದ ಹಮ್ಜಾ ಪಟೇಲ್, ಜಗದೀಶ್ ತಾಂಡೇಲ, ವಿವನ್ ಫರ್ನಾಂಡೀಸ್ ಮುಂತಾದವರು ಉಪಸ್ಥಿತರಿದ್ದು ಮಾಧ್ಯಮಕ್ಕೆ ವಿವರ ನೀಡಿದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್