December 22, 2024

Bhavana Tv

Its Your Channel

ಕೌಜಗೇರಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿ ಅನಾವರಣ

ರೋಣ:– ದಿವ್ಯ ಸಾನಿಧ್ಯ ಶ್ರೀ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಪುಣ್ಯಾರಣ್ಯ ಪತ್ರಿವನಮಠದ ನರಗುಂದ ಸಾನಿಧ್ಯ .ಶ್ರೀ ವೇ ಮೂ ಮುದಿಯಪ್ಪ ಸ್ವಾಮಿಗಳು ಸಂಸ್ಥಾನ ಹಿರೇಮಠ ಮೆಣಸಗಿ
ಶ್ರೀ ಜಗದ್ಗುರು ಮುರುಘರಾಜೇಂದ್ರ ಕುರುರ್ಣೆಶ್ವರ ಶಾಂತಿಧಾಮ ದಿವಾನ ಶರೀಫ ಶಿವಯೋಗಿಗಳು ಅಸೂಟಿ
ವಹಿಸಿದ್ದರು.

ಈ ವೇಳೆ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾಜಿ ಶಾಸಕರು ಜಿ ಎಸ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಹೋರಾಟ ನಡೆಸಿದ ಅಂಬೇಡ್ಕರ ಅವರು ಎಂದಿಗೂ ಸ್ಮರಣೀಯರು. ಅವರ ಹೋರಾಟ ಪ್ರತಿ ಪೀಳಿಗೆಗೂ ಉದಾಹರಣೆ ಮತ್ತು ಅವರ ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಟ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹ ಹಾಗೂ ಮಾಜಿ ಉಪ ಪ್ರಧಾನಿ ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರ, ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಇಂದಿನ ಪೀಳಿಕೆಯವರು ಅವರ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಬಿ ಆರ್ ಯಾವಗಲ್, ರಾಮಕೃಷ್ಣ ದೊಡ್ಮಮನಿ, ಸುರೇಶ ಕಂಠಿ, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಬೆಂಗಳೂರು ಈರಪ್ಪ ತಾಳಿ, ಕರ್ನಾಟಕ ರಾಜ್ಯ ಶೋಷಿತ ವೇದಿಕೆ ಜಿಲ್ಲಾ ಅಧ್ಯಕ್ಷರು ಉಮೇಶ ಪಾಟೀಲ, ಸಂಜಯ ದೊಡ್ಡಮನಿ, ಅಂಬು ಚಲುವಾದಿ, ವಿಜಯಕುಮಾರ್ ಚಲುವಾದಿ, ಉಮೇಶ್ ಚಲುವಾದಿ, ದೇವೇಂದ್ರಪ್ಪ ಕೊಳಪನವರು ಕೌಜಗೇರಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: