ಮುಂಬೈ, ಏಪ್ರಿಲ್ 28: ಇಡೀ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ.
ಆತಂಕದಲ್ಲಿರುವ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಮೇಯರ್ ಮುಂದಾಗಿದ್ದು, ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಯರ್ ಕಿಶೋರಿ ಪೆಡ್ನೇಕರ್ ಅವರು ನರ್ಸ್ ಆಗಿ ಸೇವೆ ಸಲ್ಲಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಹಿಂದೆ ನರ್ಸ್ ಆಗಿದ್ದ ಕಿಶೋರಿ ಪೆಡ್ನೇಕರ್ ಮತ್ತೆ ನರ್ಸ್ ಉಡುಪು ತೊಟ್ಟು ಬಿಎಂಸಿಯ ನಾಯರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.
ಈ ಮೂಲಕ ಕೊರೊನ ವೈರಸ್ ಸೋಂಕಿತರನ್ನು ಗುಣಮುಖರನ್ನಾಗಿಸಲು ಸತತವಾಗಿ ದುಡಿಯುತ್ತಿರುವ ನರ್ಸ್‌ಗಳಿಗೆ ಹಾಗೂ ಕೊರೋನಾ ವಾರಿಯರ್ಸ್‌ಗಳಿಗೆ ಮಾನಸಿಕವಾಗಿ ಬೆಂಬಲ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಮಹಾರಾಷ್ಟ್ರ ರಾಜಧಾನಿಯಲ್ಲಿ 5 ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಹಿನ್ನೆಲೆ ಇಂತಹ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಧೈರ್ಯ ತುಂಬಲು ಸ್ವತ: ಮುಂಬಯಿ ಮೇಯರ್ ನರ್ಸ್ ಉಡುಪು ತೊಟ್ಟು ಕಾರ್ಯ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲು ಮೊದಲು ಕಿಶೋರಿ ಪೆಡ್ನೇಕರ್ ಅವರು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು, ಇದೀಗ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮತ್ತೆ ನರ್ಸ್ ಸಮವಸ್ತ್ರ ಧರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,068 ಏರಿಕೆಯಾಗಿದ್ದು, ಈ ಪೈಕಿ 1,076 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 342 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಮುಂಬೈಯಲ್ಲಿದ್ದ 1036 ಕಂಟೈನ್‌ಮೆಂಟ್ ಝೋನ್‌ಗಳ ಪೈಕಿ 231 ಝೋನ್‌ಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕೊವಿಡ್ 19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಬೆಂಬಲ ನೀಡಲು ಇಚ್ಛಿಸುತ್ತೇನೆ ಎಂದು ಮುಂಬೈ ಮಹಾನಗರದ ಮೇಯರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
source: oneindia.com
More Stories
ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ
‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
NEET-PG ಪರೀಕ್ಷೆ ಕನಿಷ್ಠ ʼ4 ತಿಂಗಳು ಮುಂದೂಡಿಕೆʼ; ಕೇಂದ್ರ ಸರ್ಕಾರ ಘೋಷಣೆ