February 14, 2025

Bhavana Tv

Its Your Channel

ಆಂಧ್ರದಲ್ಲಿ ಅನಿಲ ಸೋರಿಕೆ ೮ ಮಂದಿ ಸ್ಥಳದಲ್ಲೆ ಸಾವು

ಆಂಧ್ರಪ್ರದೇಶದ ವೈಜಾಗ್ ನಲ್ಲಿ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.ಮೃತರಲ್ಲಿ ಇಬ್ಬರು ಹಿರಿಯ ನಾಗರಿಕರು ಮತ್ತು ೮ ವರ್ಷದ ಬಾಲಕಿ ಕೂಡ ಇದ್ದಾರೆ. ಸುಮಾರು ೫೦೦೦ಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಗುರುವಾರ ಬೆಳಗಿನ ಜಾವ ವೈಜಾಗ್ ನಲ್ಲಿ ರಾಸಾಯನಿಕ ಅನಿಲ ಸ್ಥಾವರದಿಂದ ಅನಿಲ ಸೋರಿಕೆಯಾಗಿದೆ. ಗೋಪಾಲಪಟ್ಟಣಕ್ಕೆ ಸಮೀಪವಿರುವ ನಾಯ್ಡು ತೋಟ ಪ್ರದೇಶದ ಆರ್.ಆರ್. ವೆಂಕಟಪುರA ಆರ್.ಜಿ. ಪಾಲಿಮರ್ ಉದ್ಯಮದಲ್ಲಿ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಅನಿಲ ಸೋರಿಕೆ ಉಂಟಾಗಿದೆ. ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.ಅನೇಕ ಜನ ರಸ್ತೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದು, ಉಸಿರಾಟದ ತೊಂದರೆ ಎದುರಿಸುವಂತಾಗಿದೆ.

error: