November 1, 2024

Bhavana Tv

Its Your Channel

ವಿಷ್ಣುತೀರ್ಥದಲ್ಲಿ ಕಮಟಾ ನಾಗರಿಕರ ಈಜಾಟ

ಕುಮಟಾ ಪಟ್ಟಣದ ಚಿತ್ರಿಗಿಯಲ್ಲಿರುವ ವಿಷ್ಣುತೀರ್ಥ ಕೆರೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಭಾನುವಾರ ಕುಮಟಾ ನಾಗರಿಕರು ಮತ್ತು ಮಕ್ಕಳು ಮನತುಂಬಿ ಈಜಾಡಿ ಖುಷಿಪಟ್ಟರು.

ನಮ್ಮಲ್ಲಿ ಈಜು ಕಲಿಯಬೇಕೆಂದರೆ ಯಾವುದೇ ಈಜು ಕೊಳಗಳಿಲ್ಲ, ಇಲ್ಲಿ ಕೆರೆಗಳೆ ಈಜುಕೊಳಗಳು, ಇದು ಮಳೆಗಾಲದಲ್ಲಿ ತುಂಬಿ ಹರಿಯುವದರಿಂದ ಮಳೆಗಾಲದಲ್ಲಿ ಮಾತ್ರ ಜನರು ಕರೆಯಲ್ಲಿ ಈಜಿ ಕುಶಿ ಪಡುತಾರೆ, ಕುಮಟಾ ತಾಲೂಕಿನಲ್ಲಿ ಅನೇಕ ಕೆರೆಗಳಿದ್ದರು ಹೆಚ್ಚಿನವು ಈಜಲು ಅನುಕೂಲವಿಲ್ಲ, ಈಜು ಕಲಿಕೆಯ ಏಕೈಕ ತಾಣ ಆಗಿರುವ ವಿಷ್ಣುತೀರ್ಥಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ನಾಗರಿಕರು, ಮಕ್ಕಳು ಬರುತ್ತಾರೆ. ವಾರದ ಕೊನೆಯಲ್ಲಿ ಮತ್ತು ಸರ್ಕಾರಿ ರಜಾದಿನಗಳಲ್ಲಿ ಇಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ.

“ಕುಮಟಾ ಜನತೆಗೆ ಈಜಾಡಲು ಮತ್ತು ಈಜು ಕಲಿಯಲು ಇದೊಂದೆ ಕೆರೆ ಇರುವುದು. ಹಾಗಾಗಿ ಎಲ್ಲರೂ ಇಲ್ಲೇ ಬರುತ್ತಾರೆ. ಇಲ್ಲಿ ಪಟಗಾರ್ ಸರ್ ಅಂತ ಒಬ್ಬರಿದ್ದಾರೆ. ಅವರು ಈಜು ಕಲಿಯುವವರಿಗೆ ಅತ್ಯುತ್ತಮವಾಗಿ ಹೇಳಿಕೊಡುತ್ತಾರೆ. ಇಲ್ಲಿ ವಿವಿಧ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ನುಗಳು ಬರುತ್ತಾರೆ. ವಿಶೇಷವಾಗಿ ಹೆಣ್ಮಕ್ಕಳು ಚಿಕ್ಕವರಿದ್ದಾಗಲೇ ಈಜು ಕಲಿತರೆ ಉತ್ತಮ” ಎಂದು ಕೊಂಕಣ ಎಜ್ಯುಕೇಶನ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಸಂಜೀವ ಕಾಮತ್ ಅಭಿಪ್ರಾಯಪಟ್ಟರು.

ಈಜು ತರಬೇತುದಾರ ಮಾಸೂರಿನ ಜಿ ಸಿ ಪಟಗಾರ ಮಾತನಾಡಿ, “ವಿಷ್ಣುತೀರ್ಥಕ್ಕೆ ಅನೇಕ ಮಕ್ಕಳು ಈಜಲು ಬರುತ್ತಾರೆ. ನಾನು ಕಳೆದ 2 ದಶಕದಿಂದ ಇಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ನಮ್ಮಲ್ಲಿ ಈಜು ತರಬೇತಿ ಪಡೆದ 5-6 ಹುಡುಗರು ಯುನಿವರ್ಸಿಟಿ ಬ್ಲೂ ಆಗಿದ್ದಾರೆ. ನ್ಯಾಷನಲ್ ಮಟ್ಟಕ್ಕೂ ಹೋಗಿದ್ದಾರೆ. ಕಳೆದ 10 ವರ್ಷದಿಂದ ನಾವು ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.

ಮಗಳೊಂದಿಗೆ ವಿಷ್ಣುತೀರ್ಥಕ್ಕೆ ಈಜಲು ಬಂದ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ್ ನಾಯಕ್ ಮಾತನಾಡಿ, “ಇಲ್ಲಿ ಸ್ವಿಮ್ಮಿಂಗ್ ಕಲಿಕೆಗೆ ಸಾಕಷ್ಟು ಅವಕಾಶವಿದೆ. ಈಜು ಕಲಿತವರು ಮಕ್ಕಳಿಗೆ ಸಾಕಷ್ಟು ಟೆಕ್ನಿಕ್ಸ್ ಹೇಳಿಕೊಡುತ್ತಾರೆ. ಇಲ್ಲಿ ಈಜು ಕಲಿತವರು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೂ ಹೋಗಿದ್ದಾರೆ ಎಂದು ಕೇಳಿದ್ದೇನೆ. ಇಲ್ಲಿಯ ಕೆರೆ ಕೂಡ ಕ್ಲೀನ್ ಇದೆ. ಶುಭ್ರವಾದ ನೀರೂ ಬರುತ್ತಿದೆ, ಹಾಗಾಗಿ ಇದು ಅನೇಕರಿಗೆ ಅನುಕೂಲವಾಗಿದೆ” ಎಂದರು.
ಸರಕಾರ ಪ್ರತಿ ತಾಲ್ಲೂಕಿನಲ್ಲಿ ಉತ್ತಮ ಕೆರೆಗಳನ್ನು ಅಭಿವೃದ್ದಿ ಪಡಿಸಿದಲ್ಲಿ ಸಾರ್ವಜನಿಕರಿಗೆ ಈಜು ಕಲಿಯಲು ಅನೂಕೂಲವಾಗುತ್ತಿತ್ತು, ಜನ ಪ್ರತಿನಿದಿಗಳು ಹಾಗೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿದ್ದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ,.

error: