May 16, 2024

Bhavana Tv

Its Your Channel

ಜುಲೈ 8 ರಿಂದ 10 ರವರೆಗೆ ಸಸ್ಯ ಹಾಗೂ ಬೀಜಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ

ಕುಮಟಾ:- ಜುಲೈ 8, 9 ಹಾಗೂ 10 ರಂದು ಸಸ್ಯ ಹಾಗೂ ಬೀಜಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ ಎಂದು ಶಿರಸಿಯ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿoಗ ಹೆಗಡೆ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಮಾರ್ಕೆಟಿಂಗ್ ಸೌಹಾರ್ದ್ ಸಹಕಾರಿ ಶಿರಸಿ, ತೋಟಗಾರಿಕಾ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಯುಗಾದಿ ಉತ್ಸವ ಸಮಿತಿ ಮತ್ತು ಉತ್ತರಕನ್ನಡ ಸಾವಯವ ಒಕ್ಕೂಟದ ವತಿಯಿಂದ ಬೀಜಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ,
ಅವರು ಕುಮಟಾ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸಸ್ಯ ಮೇಳದಲ್ಲಿ ಪುತ್ತೂರಿನ ಜಾಕ್ ಅನಿಲ ಅವರು ಅಭಿವೃದ್ಧಿ ಪಡಿಸಿದ 25 ಕ್ಕೂ ಅಧಿಕ ಹಲಸಿನ ತಳಿಗಳು, ಎನ್.ಡಿ.ಹೆಗಡೆ ಅಂತ್ರವಳ್ಳಿ ಅಭಿವೃದ್ಧಿ ಪಡಿಸಿದ ಉತ್ತಮ ತಳಿಯ ಕಾಳುಮೆಣಸಿನ ಬಳ್ಳಿ, ಕದಂಬ ಮಾರ್ಕೆಟಿಂಗ್ ಅವರ ವಿವಿಧ ಬಗೆಯ ಸಾಂಬಾರ ಬೆಳೆಗಳ ಗಿಡಗಳು, ಯು.ಕೆ.ಕೊಫೆಡ್ ಇವರಿಂದ ವಿವಿಧ ಬೀಜಗಳು, ಕಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ವಿವಿಧ ಬಗೆಯ ಹಣ್ಣು ಹಾಗೂ ಹೂವಿನ ಗಿಡಗಳು, ಗೇರು, ಮಾವು ಹಾಗೂ ವಿವಿಧ ಜಾತಿಯ ಗಿಡಗಳು ದೊರೆಯಲಿದೆ. ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಿದರು.
ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಉದ್ಯಮಿ ಮುರುಳೀಧರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿAಗ ಹೆಗಡೆ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಐ.ಎಸ್.ಕಟಗೇರಿ, ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ, ಕೃಷಿ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಡಾ.ಶ್ರೀಪಾದ ಕುಲಕರ್ಣಿ, ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ಜೆ.ಮAಜು, ಕುಮಟಾದ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥೆ ಡಾ.ಯಶಸ್ವಿನಿ ಶರ್ಮಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ ನಾಯ್ಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀ ಶಹಾಪೂರಮಠ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಮುರುಳೀಧರ ಪ್ರಭು, ಮಾರುಕಟ್ಟೆ ಸಲಹೆಗಾರ ವಿಶ್ವೇಶ್ವರ ಭಟ್ಟ ಕೃಷಿ ವಿಜ್ಞಾನಿ ಶಿವಶಂಕರಮೂರ್ತಿ, ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥೆ ಡಾ.ಯಶಸ್ವಿನಿ ಶರ್ಮಾ, ಸುಬ್ರಾಯ ನಾಯ್ಕ ಇದ್ದರು.

error: