ಕೊಡಗು: ಆರೋಗ್ಯ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರ ದೊಂದಿಗೆ ಒಟ್ಟು 4ಜನ ಅನಾಥರನ್ನು ಬೆಂಗಳೂರು ಆಟೋರಾಜ ಸಂಸ್ಥೆಗೆ ಸೇರಿಸಲಾಯಿತು.
ಕೊಡಗು ಜಿಲ್ಲೆಯ ವಿವಿಧೆಡೆ ಅನಾಥರು ಬಸ್ ನಿಲ್ದಾಣಗಳಲ್ಲಿ ಅಲ್ಲಿ ಇಲ್ಲಿ ತಿರುಗಾಡಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದ ಮಹಿಳೆಯರು (ಅಸ್ಸಾಂ ಮೂಲದ ಮಹಿಳೆ ) ಮಾನಸಿಕ ಅಸ್ವಸ್ಥರಂತೆ ಕಂಡು ಬರುತ್ತಿದ್ದರು . ಮತ್ತು ಭಾಗಮಂಡಲ ದಿಂದ ಒಬ್ಬರನ್ನು (ಗಂಡಸು) ಹಾಗೂ ಗೋಣಿಕೊಪ್ಪದಿಂದ 2ಮಹಿಳೆಯರನ್ನು ಕರೆದುಕೊಂಡು ಹೋಗಿ ಬೆಂಗಳೂರು ಆಟೋರಾಜ ಫೌಂಡೇಶನ್ ಗೆ ಖುದ್ದಾಗಿ ಹೋಗಿ ಸೇರಿಸಲಾಯಿತು .
ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ರವರು ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟರು. ಸಾರ್ವಜನಿಕರು ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಬೇರೆಡೆಗೆ ಸಾಗಿಸಬೇಕೆಂದು ಒತ್ತಡ ಬರುತ್ತಿತ್ತು ಹಾಗಾಗಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ತುಂಬಾ ಹುಡುಕಾಡಿ ಕೊನೆಗೂ ಸಿಕ್ಕ ಅವರನ್ನು ಕರೆದುಕೊಂಡು ಹೋಗಲಾಯಿತು ಮತ್ತು ಭಾಗಮಂಡಲಕ್ಕೆ ಹೋಗಿ ಮತ್ತೊಬ್ಬ ಅನಾಥರನ್ನು ಕರೆದುಕೊಂಡು ಗೋಣಿಕೊಪ್ಪದಿಂದ ಅನಾಥ 2 ಮಹಿಳೆಯರನ್ನು ಆಂಬುಲೆನ್ಸ್ ನಲ್ಲಿ ಕೂರಿಸಿಕೊಂಡು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸಲಾಗಿದೆ
ಈ ಸಂದರ್ಭದಲ್ಲಿ ಅನಾಥರನ್ನು ಅನಾಥ ಆಶ್ರಮಕ್ಕೆ ಸೇರಿಸಲು ಸಹಕಾರ ಕೊಟ್ಟಂತಹ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಂತಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಕ್ಟರ್ ವೆಂಕಟೇಶ್ ಹಾಗೂ ಜಿಲ್ಲಾ ಮಾನಸಿಕ ಕಾರ್ಯಕ್ರಮದ ಅಧಿಕಾರಿಗಳಾದ ಡಾಕ್ಟರ್ ಆನಂದ್ ಹಾಗೂ ಮಾನಸಿಕ ತಜ್ಞರಾದ ಡೆವಿನ್ ರವರನ್ನು ಕರ್ನಾಟಕ ರಕ್ಷಣಾ ವೇದಿಕೆಯು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕರವೇ ಫ್ರಾನ್ಸಿಸ್ ಡಿಸೋಜಾ ಹೇಳಿದರು
More Stories
ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೇರೆದ ಕರವೇ ಫ್ರಾನ್ಸಿಸ್ ಡಿಸೋಜಾ.
ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ
ಗೌಡಳ್ಳಿ ಗ್ರಾಮ ಪಂಚಾಯಿತಿ ಮುಂದೆ ಉದ್ಯಾನವನದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ