April 30, 2024

Bhavana Tv

Its Your Channel

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನೆರೆದಿರುವÀ ಅತಿಥಿಗಳು ,ಪಂಡಿತ ಜವಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿದರು. ನಂತರದಲ್ಲಿ 2022ನೇ ಸಾಲಿನ ರಾಜ್ಯ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ಪಡೆದಿರುವ ಜಾನಪದ ಕಲಾವಿದೆ ಶಾರದ ಮೊಗೇರ ಇವರನ್ನು ಸನ್ಮಾನಿಸಿದರು.ಇವರು ನೆರೆದಿರುವ ಮಕ್ಕಳಿಗಾಗಿ ಜನಪದ ಹಾಡುಗಳನ್ನು ಹಾಡಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಟ್ರಸ್ಟಿ ಮತು ಆಡಳಿತ ನಿರ್ದೇಶಕಿರಾದ ಡಾ|| ಪುಷ್ಪಲತಾ ವೈದ್ಯರವರು ಮಾತನಾಡುತ್ತಾ ಬಾಲ್ಯ ಎನ್ನುವುದು ನಮಗೆ ಸಿಕ್ಕ ಉಡುಗೂರೆ ಅದನ್ನು ಸಂತೋಷದಿAದ ಬದುಕಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳು ದೇಶದ ಭವಿಷ್ಯ ನಿರ್ಮಾಣಮಾಡುವ ಶಕ್ತಿ ಇರುವುದು ತರಗತಿಯ ಕೋಣೆಗಳಲ್ಲಿ ಅವರಿಗೆ ಉತ್ತಮವಾದ ಶಿಕ್ಷಣ ಕೊಡುವುದು ಶಾಲೆಗಳ ಕರ್ತವ್ಯ. ಶಿಕ್ಷಣ ಎನ್ನುವುದು ಕೇವಲ ಸರ್ಟೀಫಿಕೇಟ್ ಗಳಿಗೆ ಸೀಮಿತವಾಗದೆ ಅವರ ಚಿಂತನೆ ಮತ್ತು ನಡೆವಳಿಕೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ಮಾರ್ಗದರ್ಶನ ನೀಡಿದಲ್ಲಿ ಮಾತ್ರ ಪ್ರತಿಯೊಂದು ಮಗು ದೇಶದ ಆಸ್ತಿ ಆಗಲು ಸಾಧ್ಯ. ಪ್ರತಿ ಮಗುವು ತನ್ನದೇ ಆತ ವಿಶೇಷತೆಗಳನ್ನು ಒಳಗೊಂಡಿರುತ್ತದೆ, ಅದನ್ನು ಗುರುತಿಸಿ ಪೋಷಿಸಿ ಹೊಸ ವಿಷಯಗಳ ಕಲಿಕೆಗೆ ಮಗುವು ತೆರೆದುಕೊಳ್ಳುವಂತಹ ಅವಕಾಶ ಸೃಷ್ಟಿಯಾಗಬೇಕು.ಮಕ್ಕಳು ಶುದ್ಧವಾದ ಮನಸ್ಸು ಮತ್ತು ಮುಗ್ದತೆಯೊಂದಿಗೆ ಶಿಸ್ತು ,ಸಮಯ ಪಾಲನೆ, ನಿರಂತರ ಕಲಿಯುವಿಕೆ, ಧೃಡಸಂಕಲ್ಪ, ಪರಿಶ್ರಮ, ಧೈರ್ಯ, ಛಲ ಮತ್ತು ಜ್ಞಾನವನ್ನು ಮೈಗೂಡಿಸಿಕೊಂಡಾಗ ಯಾವುದೇ ಗುರಿಯನ್ನು ಮುಟ್ಟುವುದು ಅಸಾಧ್ಯವಲ್ಲ ಎಂದು ತಿಳಿ ಹೇಳುತ್ತಾ ಮಕ್ಕಳ ದಿನಾಚರಣೆಯ ಶುಭ ಹಾರೈಸಿದರು.
ಶಿಕ್ಷಕಿ ಶ್ರೀಮತಿ ಜ್ಯೋತಿ ರವರು ಮಕ್ಕಳ ದಿನಾಚರನೆಯ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು.ವೇದಿಕೆ ಮೇಲೆ ಶಾಲೆಯ ಪ್ರಾಂಶುಪಾಲರಾದ ಪ್ರಹ್ಲಾದ ರಾಯಚೂರು ರವರು ಹಾಗೂ ಶೈಕ್ಷಣಿಕ ಸಂಯೋಜಕರಾದ ಕೃಷ್ಣಮೂರ್ತಿ ಶೆಟ್ಟಿ ಉಪಸ್ಥತರಿದ್ದರು.ಮಕ್ಕಳ ಆಚರಣೆಯ ವಿಶೇಷತೆಗಾಗಿ 10ನೇ ತರಗತಿಯ ಮಕ್ಕಳು ಶಿಕ್ಷಕರಾಗಿ ಉಳಿದ ತರಗತಿಗೆ ಭೋದಿಸಿರು. ತದನಂತರದಲ್ಲಿ ಮಕ್ಕಳಿಗಾಗಿ ನಡೆದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರದಲ್ಲಿ ಸಂಸ್ಥೆಯ ಶಿಕ್ಷಕರು ಮಕ್ಕಳಿಗಾಗಿ ತಾವು ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ರಂಜಿಸಿದರು.ಸAಯೋಜಕರಾದ ಕೃಷ್ಣ ಮೂರ್ತಿಬರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕಿ ಮಂಜುಳಾ ರವರು ಎಲ್ಲರನ್ನು ವಂದಿಸಿದರು.ಶಿಕ್ಷಕಿ ವಿದ್ಯಾ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.

error: