May 3, 2024

Bhavana Tv

Its Your Channel

ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಶಿಬಿರ

ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ, ಭಟ್ಕಳ, ಕುಮಟಾ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಶಿಬಿರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಡಿ.ಎಚ್.ಓ ಶರತ್ ನಾಯಕ ಮಾತನಾಡಿ ಕೆಲಸದ ಒತ್ತಡ ನಡುವೆ ಸೇವೆ ಸಲ್ಲಿಸುವ ಸಿಬ್ಬಂದಿಗಳು ತಮ್ಮ ಆರೋಗ್ಯದ ಕಾಳಜಿ ವಹಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ಅದರಂತೆ ಇಂದು ಶಿಬಿರ ಆಯೋಜಿಸಲಾಗಿದೆ. ರೋಗಗಳಲ್ಲಿ ಎರಡು ರೀತಿಯಲ್ಲಿ ವಿಂಗಡಿಸಲಾಗಿದ್ದು, ಇಂದು ನಾವು ಸಾಂಕ್ರಾಮಿಕ ರೋಗಗಳ ಕುರಿತು ತಪಾಸಣೆ ನಡೆಸದೇ, ಇನ್ನುಳಿದ ಖಾಯಿಲೆಯ ಕುರಿತು ಶಿಬಿರ ಆಯೋಜಿಸಲಾಗಿದೆ. ನುರಿತ ವೈದ್ಯರು ಹಾಗೂ ಸಿಬ್ಬಂದಿಗಳಿAದ ಪರೀಕ್ಷೆ ನಡೆಸಿ ಸಲಹೆ ಹಾಗೂ ಔಷಧಿಗಳನ್ನು ನೀಡಲಾಗುವುದು ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇ.ಓ ಸುರೇಶ ನಾಯ್ಕ ಮಾತನಾಡಿ ಸಿ.ಇ.ಓ ಸಲಹೆ ಮೇರೆಗೆ  ಮೂರು ತಾಲೂಕಿನ ತಾಲೂಕ ಪಂಚಾಯತಿ ಹಾಗೂ ಗ್ರಾ.ಪಂ.ಸಿಬ್ಬAದಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ವಾರಿಯರ್ಸ್ ರೀತಿಯಲ್ಲಿ ಸೇವೆ ಸಲ್ಲಿಸುವ ಕಾರ್ಯ ನಮ್ಮೆಲ್ಲರಿಂದ ನಡೆದಿದೆ. ಇಂದು ಇಲಾಖೆಯ ಕೆಲಸದ ಒತ್ತಡದ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಈ ಶಿಬಿರ ಆಯೋಜಿಸಿದ್ದು, ಇದರ ಪ್ರಯೋಜನವನ್ನು ಸಿಬ್ಬಂದಿಗಳು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
 ವೇದಿಕೆಯಲ್ಲಿ ಭಟ್ಕಳ ತಾಲೂಕಿನ ಇಓ ಪ್ರಭಾಕರ ಚಿಕ್ಕನಮನೆ, ಜಿಲ್ಲಾ ಆರೋಗ್ಯ ಸರ್ವೆಕ್ಷಣಾಧಿಕಾರಿ ಡಾ. ಅರ್ಚನಾ ನಾಯ್ಕ,  ಟಿ.ಎಚ್.ಓ ಉಷಾ ಹಾಸ್ಯಗಾರ,  ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ,  ವೈದ್ಯರಾದ ಪ್ರಕಾಶ ನಾಯ್ಕ, ಲಕ್ಷ್ಮೀಶ ನಾಯ್ಕ, ತೇಜಸ್ವೀನಿ, ಶ್ರೀನಿವಾಸ, ಗ್ರಾ.ಪಂ.ಅಧಿಕಾರಿ ಸಂಘದ ಅಧ್ಯಕ್ಷ  ರಾಧಾಕೃಷ್ಣ ನಾಯ್ಕ,  ಕಾರ್ಯದರ್ಶಿ ನಾಗರಾಜ ನಾಯ್ಕ, ಫಾತಿಮಾ ಕುಮಟಾ, ಪಿ.ಡಿ.ಓ ಕಿರಣಕುಮಾರ್, ಅಣ್ಣಪ್ಪ ಮುಕ್ರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರಾದ  ಕೃಷ್ಣಾನಂದ ಕೆ. ಸ್ವಾಗತಿಸಿ, ಗ್ರಾ.ಪಂ. ಸಿಬ್ಬಂದಿ ಸಂಘದ ಖಜಾಂಚಿ ರಾಘವ ಮೇಸ್ತ ವಂದಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
    ಕಾರ್ಯಕ್ರಮದ ಬಳಿಕ 300ಕ್ಕೂ ಅಧಿಕ ಸಿಬ್ಬಂದಿಗಳು ಆರೋಗ್ಯ ತಪಾಸಣೆಗೆ ಹೆಸರು ನೊಂದಾಯಿಸಿ ಪರೀಕ್ಷಿಸಿ ಆರೊಗ್ಯ ಸಲಹೆ ಪಡೆದರು.
error: