April 30, 2024

Bhavana Tv

Its Your Channel

ಭಟ್ಕಳ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಅನರ್ಹ

ಭಟ್ಕಳ: ಇಲ್ಲಿನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾ೦ಕಿನಲ್ಲಿ (ಪಿಎಲ್‌ಡಿ) ೨೪ ದಿನಗೂಲಿ ಸಿಬ್ಬಂದಿ ನೇಮಕ ಹಾಗೂ ಖಾಯಂಮಾತಿ ಸಂದರ್ಭ ನಿಯಮ ಪಾಲಿಸಿಲ್ಲ ಎಂದು ಕಾರವಾರದ ಸಹಕಾರ ಸಂಘಗಳ ಉಪನಿಬ೦ಧಕರು ಬ್ಯಾ೦ಕಿನ ಆಡಳಿತ ಮಂಡಳಿಯನ್ನು ಒ೦ದು ವರ್ಷದ ಅವಧಿಗೆ ಅನರ್ಹಗೊಳಿಸಿ  ಆದೇಶ ಹೊರಡಿಸಿದ್ದಾರೆ.
ಪಿಎಲ್ ಡಿ ಬ್ಯಾಂಕ್ ಆಡಳಿತ ಮ೦ಡಳಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಕುಮಟಾದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಲಮನೆ ಅವರನ್ನು ಬ್ಯಾಂಕಿನ ಚುನಾವಣೆ ನಡೆಯುವವರೆಗೆ ವಿಶೇಷ ಆಡಳಿತಾಧಿಕಾರಿ ಎಂದು ನೇಮಕ ಮಾಡಲಾಗಿದೆ.
ಭಟ್ಕಳ ಪಿಎಲ್ ಡಿ ಬ್ಯಾಂಕಿನಲ್ಲಿ ೧೫ ಮಂದಿ ನಿರ್ದೇಶಕರಿದ್ದು, ಮಾಜಿ ಶಾಸಕ ಸುನೀಲ ನಾಯ್ಕ  ಅಧ್ಯಕ್ಷರಾಗಿದ್ದಾರೆ. ಉಪನಿಬಂಧಕರು ತಮ್ಮ ಆದೇಶದಲ್ಲಿ ದಿನಗೂಲಿ ಸಿಬ್ಬಂದಿ ನೇಮಕಾತಿ ಸಮಿತಿ ರಚಿಸಿಕೊಳ್ಳದೇ ಸಹಕಾರ ನಿಬಂಧಕರ ಪ್ರತಿನಿಧಿ
ನಿಯೋಜಿಸದೇ ನೇರ ನೇಮಕಾತಿ ಅರ್ಜಿ ಕರೆಯದೇ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸದೇ  ದಿನಗೂಲಿ ನೌಕರರನ್ನು ಖಾಯಂಗೊಳಿಸಿ ನೇಮಕ ಇದು ಕರ್ನಾಟಕ ಸಹಕಾರಿ ಸಂಘಗಳನಿಯಾಮವಳಿ ೧೯೬೦ ನಿಯಮ೧೭ ಮತ್ತು ೧೮ನ್ನು ಉಲ್ಲಂಘನೆ ಮಾಡಿದ್ದರಿಂದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾ೦ಕಿನ ಆಡಳಿತ ಮಂಡಳಿ ನಿರ್ದೇಶಕರನ್ನು ಒಂದು ವರ್ಷದ ಅವಧಿಗೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ ಪ್ರಕರಣ ಅನರ್ಹಗೊಳಿಸಿದ್ದಾರೆ.
೨೯-ಂ ರನ್ವಯ ಅನರ್ಹಗೊಂಡ ಸದಸ್ಯರು ಈ ಅವಧಿಯಲ್ಲಿ ಇನ್ನೊಂದು ಸಂಘದ ಡೆಲಿಗೇಟಾಗಿ ಚುನಾಯಿತ ರಾಗಲು, ನೇಮಕಗೊಳ್ಳಲು, ಮುಂದುವರಿಯಲು ಅರ್ಹತೆ ಇರುವುದಿಲ್ಲ ಎಂದೂ ತಿಳಿಸಲಾಗಿದೆ.
ಈಗಾಗಲೇ ಪಿಎಲ್ ಡಿ ಬ್ಯಾಂಕಿನ ನಾಲ್ಕು ಮಂದಿ ನಿರ್ದೇಶಕರು ಅನರ್ಹ ಆದೇಶ ಬರುವ ಪೂರ್ವದಲ್ಲೇ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭಟ್ಕಳ ಪಿಎಲ್‌ಡಿ ಬ್ಯಾಂಕಿಗೆ ಇನ್ನು ಒಂದೂವರೆ ತಿಂಗಳಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ, ಚುನಾವಣೆ ಸನಿಹದಲ್ಲೇ ಪ್ರಸ್ತುತ ಬ್ಯಾ೦ಕಿನ ಆಡಳಿತ ಮಂಡಳಿ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ. ಅನರ್ಹತೆಗೊಳಗಾದ ನಿರ್ದೇಶಕರು ಕಾನೂನು ಹೋರಾಟಕ್ಕೆ ಮುಂದಾಗುವ ಎಲ್ಲ ಸಾಧ್ಯತೆ ಎನ್ನಲಾಗಿದೆ.

error: